ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನಿಮ್ಮ ಅಂಗೈಗೆ ಕೋವಿಡ್-19 ಲಸಿಕೆ ಸರ್ಟಿಫಿಕೇಟ್: ವಾಟ್ಸ್ಯಾಪ್ ಮೂಲಕ ದೃಢೀಕರಣ ಪತ್ರ ಪಡೆಯೋದು ಬಹು ಸರಳ: ಪ್ರತಿ ಹೆಜ್ಜೆಯ ಸರಳ ವಿವರ‌ ನಿಮಗಾಗಿ

ನಿಮ್ಮ ಅಂಗೈಗೆ ಕೋವಿಡ್-19 ಲಸಿಕೆ ಸರ್ಟಿಫಿಕೇಟ್: ವಾಟ್ಸ್ಯಾಪ್ ಮೂಲಕ ದೃಢೀಕರಣ ಪತ್ರ ಪಡೆಯೋದು ಬಹು ಸರಳ: ಪ್ರತಿ ಹೆಜ್ಜೆಯ ಸರಳ ವಿವರ‌ ನಿಮಗಾಗಿ

ಬೆಳ್ತಂಗಡಿ: ನೀವು ಕೋವಿಡ್-19 ನಿರೋಧಕ ಲಸಿಕೆ ಪಡೆದಿದ್ದೀರಾ...? ಹಾಗಾದ್ರೆ ನಿಮ್ಮ ಅಂಗೈಗೆ ಲಸಿಕೆ ಸರ್ಟಿಫಿಕೇಟ್, ವಾಟ್ಸ್ಯಾಪ್ ಮೂಲಕ ಶೀಘ್ರ ಹಾಗೂ ಸರಳ ಪ್ರಕ್ರಿಯೆ ಮೂಲಕ ತಲುಪಲಿದೆ. ನೀವು ಏನು‌ ಮಾಡಬೇಕು, ಯಾವೆಲ್ಲಾ ಸಂದೇಶಗಳನ್ನು ‌ರವಾನಿಸಬೇಕು ಎಂಬ ಬಹು ಸರಳ ವಿವರವನ್ನು 'ಪ್ರಜಾಪ್ರಕಾಶ ನ್ಯೂಸ್' ತಂಡ ನಿಮ್ಮ ಮುಂದಿಟ್ಟಿದೆ. ಇಲ್ಲಿದೆ‌ ಪ್ರತಿ ಹೆಜ್ಜೆಯ ಸರಳ ವಿವರಗಳು... ಹೆಜ್ಜೆ 1: ನೀವು ಲಸಿಕೆ ನೀಡಲು ಬಳಸಿದ ಸಂದರ್ಭ ನೀಡಿದ ದೂರವಾಣಿ ಸಂಖ್ಯೆಯ ಮೊಬೈಲ್ ನಲ್ಲಿ 9013151515 ಕೊರೋನಾ ಹೆಲ್ಪ್ ಡೆಸ್ಕ್ ಸಂಖ್ಯೆಯನ್ನು ಸೇವ್(ಉಳಿಸಿ) ಮಾಡಿಕೊಳ್ಳಬೇಕು. ಹೆಜ್ಜೆ 2: ಸೇವ್ ಮಾಡಿಕೊಂಡ ಸಂಖ್ಯೆಯ ವಾಟ್ಸ್ಯಾಪ್ ನಂ.ಗೆ ತೆರಳಿ ಅಲ್ಲಿ ಆಂಗ್ಲ‌ ಭಾಷೆಯಲ್ಲಿ Download certificate ಎಂದು ನಮೂದಿಸಿ ಸೆಂಡ್ ಮಾಡಬೇಕು. ಹೆಜ್ಜೆ 3: ಓಟಿಪಿ‌ ದಾಖಲಿಸಲು ಸೂಚನೆ ಬರುತ್ತದೆ. ನಮ್ಮ ಮೊಬೈಲ್ ಸಂಖ್ಯೆಗೆ 6 ಸಂಖ್ಯೆಗಳ ಒಟಿಪಿ ಸಂದೇಶ ಬರುತ್ತದೆ. ಇದನ್ನು ನಮೂದಿಸಿ ಸೆಂಡ್ ಮಾಡಬೇಕು.

 

ಹೆಜ್ಜೆ 4: ಒಟಿಪಿ ನಮೂದಿಸಿದಾಗ ನಮ್ಮ ಹೆಸರು ಬರುತ್ತದೆ. ಸರ್ಟಿಫಿಕೇಟ್ ಪಡೆಯಲು ದೃಢೀಕರಣಕ್ಕಾಗಿ 1 ಸಂಖ್ಯೆಯನ್ನು ನಮೂದಿಸುವಂತೆ ಕೋರಲಾಗುತ್ತದೆ. 1 ಸಂಖ್ಯೆಯನ್ನು ನಮೂದಿಸಿ ಸೆಂಡ್ ಮಾಡಿದಾಗ ಸರ್ಟಿಫಿಕೇಟ್ ಲಭ್ಯವಾಗುತ್ತದೆ. ಇದು ಪಿಡಿಎಫ್ ಮಾದರಿಯಲ್ಲಿದ್ದು, ತೆರೆದು ನೋಡಬಹುದಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!