ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › 'ರಜತ' ವಿಜೇತ ರವಿಕುಮಾರ್ ದಹಿಯಾ, ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಭಾರತದ ಎರಡನೇ ಕುಸ್ತಿಪಟು: ಟೋಕಿಯೋ ಒಲಿಂಪಿಕ್ಸ್-2020 ಭಾರತಕ್ಕೆ ಬೆಳ್ಳಿ ಪದಕದ ಗರಿ

'ರಜತ' ವಿಜೇತ ರವಿಕುಮಾರ್ ದಹಿಯಾ, ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಭಾರತದ ಎರಡನೇ ಕುಸ್ತಿಪಟು: ಟೋಕಿಯೋ ಒಲಿಂಪಿಕ್ಸ್-2020 ಭಾರತಕ್ಕೆ ಬೆಳ್ಳಿ ಪದಕದ ಗರಿ

ಟೋಕಿಯೋ: ಭಾರತದ ರವಿಕುಮಾರ್ ದಹಿಯಾ ಅವರು ಟೋಕಿಯೋ ಒಲಿಂಪಿಕ್ಸ್-2020ಯ 57 ಕೆ.ಜಿ ವಿಭಾಗದ ಕುಸ್ತಿಯ ಫೈನಲ್​ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ. ಈ ಮೂಲಕ ಭಾರತಕ್ಕೆ ಕುಸ್ತಿಯಲ್ಲಿ ಬೆಳ್ಳಿ ಗೆದ್ದ ಭಾರತದ ಎರಡನೇ ಕುಸ್ತಿಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.

ಭಾರತದ ರವಿಕುಮಾರ್ ದಹಿಯಾ 57 ಕೆ.ಜಿ ವಿಭಾಗದ ಕುಸ್ತಿಯ ಫೈನಲ್​ ಪಂದ್ಯದಲ್ಲಿ ರಷ್ಯಾದ ಜೌರ್ ಉಗುವ್ ವಿರುದ್ಧ 4-7 ಅಂತರದಲ್ಲಿ ಸೋಲು ಕಾಣುವ ಮೂಲಕ ರಜತ ಪದಕ‌‌‌ ಪಡೆದರು.

ಕುಸ್ತಿಯಲ್ಲಿ 1952ರಲ್ಲಿ ಕೆ.ಡಿ. ಜಾಧವ್, ಸುಶೀಲ್ ಕುಮಾರ್(2008 ಮತ್ತು 2012), ಯೋಗೇಶ್ವರ್ ದತ್(2012) ಮತ್ತು ಸಾಕ್ಷಿ ಮಲಿಕ್(2016)ರಲ್ಲಿ ಭಾರತಕ್ಕೆ‌ ಪದಕ‌ ತಂದುಕೊಟ್ಟಿದ್ದರು.

ವಯಕ್ತಿಕ ವಿಭಾಗ ವೈಟ್ ಲಿಫ್ಟರ್​ ಮೀರಾಬಾಯಿ ಚನು, ಬಾಕ್ಸರ್​ ಲವ್ಲಿನಾ ಬೋರ್ಗೊಹೈನ್ ಮತ್ತು ಶಟ್ಲರ್​ ಪಿವಿ ಸಿಂಧು ಪದಕ‌ ಗಳಿಸಿದ್ದಾರೆ‌. ಭಾರತ ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದು ಸಾಧನೆ‌ ಮಾಡಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!