ನೆರಿಯ ಗ್ರಾಮದ ಚಾರ್ಮಾಡಿ ಕನಪ್ಪಾಡಿ ಮೀಸಲು ಅರಣ್ಯದಲ್ಲಿ ಕುಳೆನಾಡಿ ನಿವಾಸಿ ದಿ.ತುಂಗಯ್ಯ ಗೌಡರ ಮಗ ಕೆ.ಅಶೋಕ್ ಕುಮಾರ್ (59) ಎಂಬಾತ ಕಡವೆಯನ್ನು ಬೇಟೆಯಾಡಿ, ಅದರ ಮಾಂಸವನ್ನು ಮನೆಯಲ್ಲಿ ಶೇಖರಿಸಿಟ್ಟದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಬೆಳ್ತಂಗಡಿ ಅರಣ್ಯ ಇಲಾಖೆ ಅಧಿಕಾರಿಗಳು ಮನೆಗೆ ದಾಳಿ ಮಾಡಿ ಕಡವೆ ತಲೆ ಭಾಗ ಸಹಿತ 2 ಕೊಂಬು , 4 ಕೆ.ಜಿ ಕಡವೆ ಮಾಂಸ, 3ಕಾಲು, ದೇಹದ ಚರ್ಮ, ಸಿಂಗಲ್ ಬ್ಯಾರಲ್ ಬಂದೂಕು, ಒಂದು ಗುಂಡು, ಬೇಟೆಯಾಡಲು ಬಳಸಿದ ಖಾಲಿ ಒಂದು ಗುಂಡು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ವನ್ಯಜೀವಿ ಕಾಯ್ದೆ 9, 39,50 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ , ನೆರಿಯ ವಲಯ ಉಪ ಅರಣ್ಯಾಧಿಕಾರಿ ಯತೀಂದ್ರ ಕುಮಾರ್, ಬೆಳ್ತಂಗಡಿ ಉಪ ಅರಣ್ಯಾಧಿಕಾರಿ ಪಾಂಡುರಂಗ ಕಮಾತಿ, ಉಜಿರೆ ಉಪ ವಲಯ ಅರಣ್ಯಾಧಿಕಾರಿ ಹರಿಪ್ರಸಾದ್, ನಾವೂರು ಉಪ ವಲಯ ಅರಣ್ಯಾಧಿಕಾರಿ ರಾಜೇಶ್ , ಗೇರುಕಟ್ಟೆ ಉಪ ವಲಯ ಅರಣ್ಯಾಧಿಕಾರಿ ಪೂಜಾ, ಬೆಳ್ತಂಗಡಿ ಉಪ ವಲಯ ಅರಣ್ಯಾಧಿಕಾರಿ ರವೀಂದ್ರ ಕೆ, ಅರಣ್ಯ ಗಸ್ತು ಪಾಲಕ ರವಿ ಮುಖ್ರಿ ಮತ್ತು ಪರಮೇಶ್ವರ.ಎ, ಅರಣ್ಯ ಅಧಿಸೂಚಿತ ನೌಕರ ಬಾಲಕೃಷ್ಣ ಮತ್ತು ಘಫೂರ್ ಮತ್ತು ಚಾಲಕ ಕುಸಲಪ್ಪ ಭಾಗಿಯಾಗಿದ್ದರು.