ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ; ವಿದ್ಯುತ್ ಟವರ್ ಮೇಲೆ ಬಿದ್ದ ಮರ: ಕೂದಲೆಳೆಯ ಅಂತರದಲ್ಲಿ ಪಾರಾದ ವ್ಯಕ್ತಿ..!

ಬೆಳ್ತಂಗಡಿ; ವಿದ್ಯುತ್ ಟವರ್ ಮೇಲೆ ಬಿದ್ದ ಮರ: ಕೂದಲೆಳೆಯ ಅಂತರದಲ್ಲಿ ಪಾರಾದ ವ್ಯಕ್ತಿ..!

ಬೆಳ್ತಂಗಡಿ: ವಿದ್ಯುತ್ ಟವರ್ ಮೇಲೆ ಮರ ಉರುಳಿ ಬಿದ್ದು ವ್ಯಕ್ತಿ ಗಾಯಗೊಂಡ ಘಟನೆ ಮೇ.20 ಸೋಮವಾರ ಬೆಳಗ್ಗೆ ಸಂಭವಿಸಿದೆ.

ನಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುರಿಪಳ್ಳ ಸಮೀಪದ ಬಂಡ್ರತ್ತಿಲ್ ಬಳಿ ಬೃಹತ್ ಗಾತ್ರದ ಮರ 33 ಕೆವಿ ವಿದ್ಯುತ್ ಟವರ್ ಮೇಲೆ ಉರುಳಿದೆ. ಅದೇ ಸಂದರ್ಭದಲಿ ಕನ್ಯಾಡಿಯ ರಮೇಶ್ ಎಂಬವರು ಸ್ಕೂಟರ್ ನಲ್ಲಿ ಬರುತ್ತಿದ್ದು, ಮರದ ಒಂದು ಬದಿ ತಲೆಗೆ ಬಡಿದಿದೆ. ಹೆಚ್ಚಿನ ಗಾಯಗಳಾಗದೆ ಕೂದಲೆಳೆಯ ಅಂತರದಲ್ಲಿ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.

ಗಾಯಾಳುವನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಿಂದ ಒಂದು ಗಂಟೆಗಿಂತ ಅಧಿಕಕಾಲ ಗುರಿಪಳ್ಳ-ಇಂದಬೆಟ್ಟು ರಸ್ತೆ ಸಂಪರ್ಕ ಕಡಿತಗೊಂಡಿದ್ದು ಬಳಿಕ ಮೆಸ್ಕಾಂ ಸಿಬ್ಬಂದಿ ಸ್ಥಳೀಯರ ಸಹಕಾರದಲ್ಲಿ ಮರ ತೆರವುಗೊಳಿಸಿದರು.

ಕಕ್ಕಿಂಜೆ ಸಬ್ ಸ್ಟೇಷನ್ ವಿದ್ಯುತ್ ಪೂರೈಕೆಯಲ್ಲಿ ಎರಡು ತಾಸಿಗಿಂತ ಅಧಿಕ ಕಾಲ ವಿದ್ಯುತ್ ವ್ಯತ್ಯಯ ಕಂಡುಬಂತು . ಘಟನೆಯಿಂದ 33ಕೆವಿ ವಿದ್ಯುತ್ ಟವರ್ ಗೆ ಸ್ವಲ್ಪ ಮಟ್ಟಿನ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!