ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವಸಂತ ಬಂಗೇರ ಪಾರ್ಥಿವ ಶರೀರ ನಾಳೆ ಬೆಳ್ತಂಗಡಿಗೆ: ಬಂಗೇರ ಅಭಿಮಾನಿಗಳಿಂದ ತುರ್ತು ಸಭೆ: ಮೃತರ ಗೌರವಾರ್ಥ ಹೋಟೆಲ್ ಸೇರಿದಂತೆ ಅಂಗಡಿ ಮುಂಗಟ್ಟು ಸ್ವಯಂ ಪ್ರೇರಿತ ಬಂದ್ ಗೆ ಮನವಿ: ಹಳೇಕೋಟೆಯಿಂದ ಪಾರ್ಥಿವ ಶರೀರದ ಅಂತಿಮ ಯಾತ್ರೆ: ತಾಲೂಕು ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ:

ವಸಂತ ಬಂಗೇರ ಪಾರ್ಥಿವ ಶರೀರ ನಾಳೆ ಬೆಳ್ತಂಗಡಿಗೆ: ಬಂಗೇರ ಅಭಿಮಾನಿಗಳಿಂದ ತುರ್ತು ಸಭೆ: ಮೃತರ ಗೌರವಾರ್ಥ ಹೋಟೆಲ್ ಸೇರಿದಂತೆ ಅಂಗಡಿ ಮುಂಗಟ್ಟು ಸ್ವಯಂ ಪ್ರೇರಿತ ಬಂದ್ ಗೆ ಮನವಿ: ಹಳೇಕೋಟೆಯಿಂದ ಪಾರ್ಥಿವ ಶರೀರದ ಅಂತಿಮ ಯಾತ್ರೆ: ತಾಲೂಕು ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ:

 

 

ಬೆಳ್ತಂಗಡಿ:ಮಾಜಿ ಶಾಸಕ ವಸಂತ ಬಂಗೇರ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಿಧನ ಹೊಂದಿದ್ದು ಗುರುವಾರ ಮುಂಜಾನೆ ಬೆಂಗಳೂರಿನಿಂದ ಚಾರ್ಮಾಡಿ ಮೂಲಕ   ಬೆಳ್ತಂಗಡಿಗೆ ಅವರ ಪಾರ್ಥಿವ ಶರೀರ ಆಗಮಿಸಲಿದ್ದು.   ಬಂಗೇರ ಅಭಿಮಾನಿಗಳಿಂದ ಅಂತಿಮ ಸಂಸ್ಕಾರದ ಬಗ್ಗೆ ತುರ್ತು ಸಭೆಯು ಗುರುನಾರಾಯಣ ಸಭಾ ಭವನದಲ್ಲಿ ನಡೆಯಿತು.

ಬೆಳಿಗ್ಗೆ 10.30 ಗಂಟೆಗೆ ಹಳೇಕೋಟೆ  ಅವರ ಮನೆಯಿಂದ ತಾಲೂಕು ಕ್ರೀಡಾಂಗಣಕ್ಕೆ  ಪಾರ್ಥಿವ ಶರೀರವನ್ನು  ತಂದು   ಸಾರ್ವಜನಿಕರಿಗೆ ತಾಲೂಕು  ಕ್ರೀಡಾಂಗಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.ಸಂಜೆ ಬೆಳ್ತಂಗಡಿ ನಗರದಲ್ಲಿ   ಪಾರ್ಥಿವ ಶರೀರದ ಅಂತಿಮ ಯಾತ್ರೆಯ ಮೆರವಣಿಗೆಯು ನಡೆಸಿ ಅವರಿಗೆ ಗೌರವ ಸಲ್ಲಿಸಲಾಗುತ್ತದೆ..ನಂತರ    ಅಂತ್ಯ ಸಂಸ್ಕಾರ ಕ್ರಿಯೆ ಸಕಲ ಸರ್ಕಾರಿ ಗೌರವಗಳೊಂದಿಗೆ  ನಡೆಯಲಿದೆ . ಮೃತರ ಗೌರವಾರ್ಥ ನಗರದ ಹೋಟೆಲ್ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿ ಅವರಿಗೆ ಗೌರವ ಸಲ್ಲಿಸಬೇಕು ಎಂದು ಅವರ ಅಭಿಮಾನಿಗಳು  ವಿನಂತಿಸಿದ್ದಾರೆ. ಮೃತರ ಅಂತಿಮ ದರ್ಶನಕ್ಕೆ ಮುಖ್ಯ ಮಂತ್ರಿ  ಉಪ ಮುಖ್ಯ ಮಂತ್ರಿ  ಸೇರಿದಂತೆ ಸಚಿವರು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!