ಉಜಿರೆಯ ಬಾರ್ ವೊಂದರಲ್ಲಿ ಗುರುವಾರ ರಾತ್ರಿ ಕುಡಿದು ಹಿಂತಿರುಗಿ ಬರುತ್ತಿದ್ದ ವೇಳೆ ಅದರಲ್ಲಿ ಒಬ್ಬ ವ್ಯಕ್ತಿ ಪೋನಿನಲ್ಲಿ ಜೋರು ಧ್ವನಿಯಲ್ಲಿ ಮಾತನಾಡುತಿದ್ದಾಗ ಪಕ್ಕದಲ್ಲೆ ಇದ್ದ ಸ್ಥಳೀಯ ಯುವಕ ಮೆಲ್ಲ ಮಾತನಾಡಿ ಎಂದಿದ್ದಾರೆ. ಈ ವೇಳೆ ಸ್ಥಳೀಯರಿಗೆ ಹಾಗೂ ಕಾರಿನಲ್ಲಿ ಬಂದವರ ನಡುವೆ ಮಾತಿನ ಚಕಮಕಿ ನಡೆದು ಹಲ್ಲೆ ಯತ್ನ ಹಾಗೂ ಕಾರಿಗೆ ಕಲ್ಲು ತೂರಾಟವೂ ನಡೆದಿದೆ. ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿಗೊಳಿಸಿದರಲ್ಲದೇ ಎರಡೂ ತಂಡದವರಿಗೆ ಎಚ್ಚರಿಕೆ ನೀಡಿ ಕಳುಹಿಸಿಕೊಟ್ಟಿದ್ದಾರೆ. ಮೇಲ್ನೋಟಕ್ಕೆ ಕುಡಿದ ಮತ್ತಿನಲ್ಲಿ ಈ ಘಟನೆ ನಡೆದಿದ್ದು ಯಾವುದೇ ದೂರು ದಾಖಲಾಗಿಲ್ಲ ಎಂಬ ಮಾಹಿತಿ ತಿಳಿದು ಬಂದಿದೆ.
Home › ಉಜಿರೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ: ಕಾರ್ಯಪ್ರವೃತ್ತರಾದ ಬೆಳ್ತಂಗಡಿ ಪೊಲೀಸರು