ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಚಂದನ್ ಶೆಟ್ಟಿ-ನಿವೇದಿತಾ ವಿಚ್ಛೇದನ: ವಕೀಲೆ ಅನಿತಾ ಹೇಳಿದ ಸತ್ಯ ಸಂಗತಿ ಏನು?

ಚಂದನ್ ಶೆಟ್ಟಿ-ನಿವೇದಿತಾ ವಿಚ್ಛೇದನ: ವಕೀಲೆ ಅನಿತಾ ಹೇಳಿದ ಸತ್ಯ ಸಂಗತಿ ಏನು?

ಸೆಲೆಬ್ರಿಟಿಗಳ ಮಧ್ಯೆ ಮಿಂಚುತ್ತಿದ್ದ ಚಂದನ್‍ಶೆಟ್ಟಿ ನಿವೇದಿತ ದಂಪತಿಗಳು ವಿಚ್ಛೇದನ ಪಡೆದ ಬೆನ್ನಲ್ಲೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಹೆಚ್ಚಾಗುತ್ತಿದೆ. ಇಬ್ಬರೂ ಒಪ್ಪಿ ವಿಚ್ಛೇದನ ಪಡೆದುಕೊಂಡಿದ್ದೇವೆ ಎಂದಿರುವ ಚಂದನ್ ಶೆಟ್ಟಿ ಅದಕ್ಕೆ ಕಾರಣ ಏನೆಂಬುದನ್ನು ಸ್ಪಷ್ಟವಾಗಿ ತಿಳಿಸಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅನೇಕ ಕಾರಣಗಳ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಈ ಬಗ್ಗೆ ವಕೀಲೆ ಅನಿತಾ ಹೇಳಿದ ಸತ್ಯ ಸಂಗತಿ ಬೇರೆಯೇ ಇದೆ.

‘ಒಂದು ವರ್ಷದ ಹಿಂದೆಯೇ ಅವರು ವಿಚ್ಛೇದನಕ್ಕೆ ನಿರ್ಧರಿಸಿದ್ದರು ಎಂದು ವಕೀಲೆ ಅನಿತಾ ಹೇಳಿದ್ದಾರೆ. ಮುಂದುವರಿದು ದೊಡ್ಡವರು ಸಂಧಾನ ಮಾಡಲು ಪ್ರಯತ್ನಿಸಿದರು. ಆದರೆ, ಅದು ಆಗಿಲ್ಲ. ಇಬ್ಬರೂ ಖುಷಿಯಾಗಿದ್ದಾರೆÉ. ಇಬ್ಬರೂ ತೀರ್ಮಾನ ಮಾಡಿಕೊಂಡಿದ್ದರು. ಮಗು ಹೊಂದಲು ನಿವೇದಿತಾ ಒಪ್ಪಿಲ್ಲ, ಇದಕ್ಕೆ ವಿಚ್ಛೇದನ ಪಡೆದರು ಅನ್ನೋದು ಸುಳ್ಳು. ವಿಚ್ಛೇದನ ಪಡೆಯಲು ದೊಡ್ಡ ಮನಸ್ತಾಪಲೇ ಆಗಬೇಕಿಲ್ಲ. ಚಿಕ್ಕ ವಿಷಯಕ್ಕೂ ಭಿನ್ನಾಭಿಪ್ರಾಯ ಬರಬಹುದು. ಇಬ್ಬರ ಆಲೋಚನೆ ಬೇರೆ ಇದೆ. ಒಬ್ಬರಿಗೊಬ್ಬರು ತೆಗೆದುಕೊಂಡ ನಿರ್ಧಾರವನ್ನು ಗೌರವಿಸುತ್ತಾರೆ. ಕನಸುಗಳನ್ನು ಬೆನ್ನತ್ತಬೇಕು ಎಂದರೆ ಕೆಲವು ತ್ಯಾಗ ಮಾಡಲೇಬೇಕು’ ಎಂದಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!