ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮನೆಗೊಂದು ಕೊಡೆ – ಮಮತೆಯ ಸ್ಪರ್ಶ: ಬೆಳ್ತಂಗಡಿಯಲ್ಲಿ ಮಾದರಿ ಸೇವಾ ಕಾರ್ಯ:

ಮನೆಗೊಂದು ಕೊಡೆ – ಮಮತೆಯ ಸ್ಪರ್ಶ: ಬೆಳ್ತಂಗಡಿಯಲ್ಲಿ ಮಾದರಿ ಸೇವಾ ಕಾರ್ಯ:

 

 

ಬೆಳ್ತಂಗಡಿ :  : ಮಳೆಗಾಲದಲ್ಲಿ ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು,   ಮಂಜುನಾಥ್ ರೆಂಕೆದಗುತ್ತು ಅವರ ನೇತೃತ್ವದಲ್ಲಿ “ಮನೆಗೊಂದು ಕೊಡೆ – ಮಮತೆಯ ಸ್ಪರ್ಶ” ಎಂಬ ವಿಶೇಷ ಸೇವಾ ಕಾರ್ಯಕ್ರಮದಡಿ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ವಾರ್ಡ್ 107 ರ ಮನೆಮನೆಗೆ ಕೊಡೆಗಳ ವಿತರಣೆ ನಡೆಯಿತು.

ಮಳೆಗಾಲದಲ್ಲಿ ಶಾಲಾ ಮಕ್ಕಳು, ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಅನಗತ್ಯವಾಗಿ ಮಳೆಗೆ ನೆನೆದು ಆರೋಗ್ಯ ಸಮಸ್ಯೆಗಳಿಗೆ ಒಳಗಾಗದಂತೆ ಹಾಗೂ ಪ್ರತಿಯೊಂದು ಕುಟುಂಬಕ್ಕೂ ಉಪಯೋಗವಾಗುವ ಒಂದು ಸಣ್ಣ ಸಹಾಯವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ವಾರ್ಡ್‌ನ ಪ್ರತಿಯೊಂದು ಕುಟುಂಬದೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸುವ ಹಾಗೂ ಸಮಾಜದ ಮೇಲಿನ ಕಾಳಜಿಯ ಸಂಕೇತವಾಗಿ ಈ ಸೇವಾ ಕಾರ್ಯವನ್ನು ಕೈಗೊಳ್ಳಲಾಗಿದ್ದು, ಸ್ಥಳೀಯ ನಿವಾಸಿಗಳು ಈ ಕಾರ್ಯಕ್ರಮವನ್ನು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ರಾಜ ಕೇಸರಿ ಸೇವಾ ಟ್ರಸ್ಟ್‌(ರಿ) ಬೆಳ್ತಂಗಡಿ ಇದರ ಸ್ಥಾಪಕ ಅಧ್ಯಕ್ಷರಾದ ದೀಪಕ್ ಜಿ, ಕಿರಣ್, ಸಂತೋಷ್. ಸಂದೀಪ್, ಸುದೀಪ್, ಕುಮಾರಸ್ವಾಮಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು, ಮಳೆಗಾಲದ ಸಂದರ್ಭದಲ್ಲಿ ಜನೋಪಯೋಗಿ ಸೇವಾ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡುವ ಸಂಕಲ್ಪ ವ್ಯಕ್ತಪಡಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!