ಗುರುವಾಯನಕೆರೆ: ಕೃಷಿ ವಿಜ್ಞಾನ ವಿಭಾಗದಲ್ಲಿ ಸುಮಾರು 5,000 ವಿದ್ಯಾರ್ಥಿಗಳ ಪೈಕಿ 53ನೇ ರ‍್ಯಾಂಕ್ ಗಳಿಸಿ ಗಮನಾರ್ಹ ಸಾಧನೆ ಮಾಡಿದ ಗುರುವಾಯನಕೆರೆ ಕೊಂಟುಪಲ್ಕೆ ನಿವಾಸಿ ಕುಮಾರಿ ನಿಧಿತಾ ಬಂಗೇರ ಅವರನ್ನು ಗುರುವಾಯನಕೆರೆ ಶ್ರೀ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಅ. 6ರಂದು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.
ಆನಂದ ಮತ್ತು ಪ್ರತಿಮಾ ದಂಪತಿಯ ಪುತ್ರಿಯಾದ ನಿಧಿತಾ ಬಂಗೇರ ಅವರು ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಗುರುವಾಯನಕೆರೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಗಣೇಶೋತ್ಸವ ಸಮಿತಿ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಗುರುವಾಯನಕೆರೆ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳಾದ ರಿಜೇಶ್ ಕುಮಾರ್ ಗುರುವಾಯನಕೆರೆ, ಸಮಿತಿ ಅಧ್ಯಕ್ಷ ಜೀವನ್ ಕುಲಾಲ್, ಗಣೇಶ್ ಕುಲಾಲ್ ಜಿ.ಕೆರೆ, ರವಿ ಸಪಲ್ಯ ಅಮರ್ ಜಾಲ್, ರವೀಂದ್ರ ಶೆಟ್ಟಿ ಪನೆಜಾಲ್, ಪ್ರದೀಪ್ ಶೆಟ್ಟಿ ಶಕ್ತಿನಗರ, ರಂಜಿತ್ ಮದ್ದಡ್ಕ, ಪ್ರೇಮ್ ಶೆಟ್ಟಿ ಗುಂಪಲಾಜೆ, ಗುರುಪ್ರಸಾದ್ ಶೇಷಗಿರಿ, ಪ್ರಶಾಂತ್ ಕುಲಾಲ್ ಜಿ.ಕೆರೆ, ಶ್ರೀರಾಜ್ ಶೆಟ್ಟಿ ಶಕ್ತಿನಗರ, ಸಚಿನ್ ಶೆಟ್ಟಿ ಪಡ್ಯಾರ್, ಮುಕೇಶ್ ಕುಲಾಲ್ ಗುರುವಾಯನಕೆರೆ, ಅರುಣ್ ಅಮರ್ ಜಾಲ್ ಹಾಗೂ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
