ಕಾರ್ಯಕ್ರಮದಲ್ಲಿ, ಅಸ್ಸಾಂನಲ್ಲಿ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಬಾಬುನಾಯ್ಕ ಹಾಗೂ ಕಲ್ಯಾಣಿಯವರ ಪುತ್ರ ಮಂಜುನಾಥ ನಾಯ್ಕ ಮದ್ದಡ್ಕ ಇವರ ಸೇವೆ ಗುರುತಿಸಿ , ಕರ್ಮಯೋಗಿ ಪುರಸ್ಕಾರ ನೀಡಲಾಗುತ್ತಿದೆ. ಮಂಜುನಾಥ ನಾಯ್ಕ್ ಅನುಪಸ್ಥಿತಿಯಲ್ಲಿ ಅವರ ಪತ್ನಿ, ಮಕ್ಕಳಾದ ಮನ್ವಿತ್ , ಮನೀಷ್ ಹಾಗೂ ತಾಯಿ ಕಲ್ಯಾಣಿ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಿಂಚನಾ , ಶರತ್, ಯಶಸ್ವಿನಿ, ರಚನಾ, ಹರ್ಷಿತ ಇವರನ್ನು ಸನ್ಮಾನಪತ್ರ ಹಾಗೂ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಉಪಾಧ್ಯಕ್ಷ ಸಂತೋಷ್ ನಾಯ್ಕ್, ನಿರ್ದೇಶಕರಾದ ಚೆನ್ನಕೇಶವ ನಾಯ್ಕ್, ಸೀತಾರಾಮ್ ಬಿ.ಎಸ್., ತಿಮ್ಮಪ್ಪ ನಾಯ್ಕ್, ಪ್ರಸಾದ್ ನಾಯ್ಕ್, ಪ್ರಶಾಂತ್ ನಾಯ್ಕ್, ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು.