ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಸಿಐಡಿ ಮೆಟ್ಟಿಲೇರಿದ ದಲಿತ ಹೋರಾಟಗಾರ ಪಿ.ಡೀಕಯ್ಯ ಅಸಹಜ ಸಾವು ಪ್ರಕರಣ.!?: ಸಿಐಡಿ ತನಿಖೆಗೆ ಒತ್ತಾಯಿಸಿದ ಮೃತ ಪಿ .ಡೀಕಯ್ಯ ಕುಟುಂಬಸ್ಥರು: ಅಸಹಜ ಸಾವಿಗೆ ಇನ್ನೂ ಸಿಗದ ಕಾರಣ..!

ಸಿಐಡಿ ಮೆಟ್ಟಿಲೇರಿದ ದಲಿತ ಹೋರಾಟಗಾರ ಪಿ.ಡೀಕಯ್ಯ ಅಸಹಜ ಸಾವು ಪ್ರಕರಣ.!?: ಸಿಐಡಿ ತನಿಖೆಗೆ ಒತ್ತಾಯಿಸಿದ ಮೃತ ಪಿ .ಡೀಕಯ್ಯ ಕುಟುಂಬಸ್ಥರು: ಅಸಹಜ ಸಾವಿಗೆ ಇನ್ನೂ ಸಿಗದ ಕಾರಣ..!

ದ.ಕ: ಹಿರಿಯ ದಲಿತ ಮುಖಂಡ, ಸಾಹಿತಿ ಪಿ.ಡೀಕಯ್ಯ ಅವರ ಅಸಹಜ ಸಾವಿನ ಪ್ರಕರಣದ ತನಿಖೆ ಪೊಲೀಸ್ ಇಲಾಖೆಯಿಂದ ಸಿಐಡಿ ಮೆಟ್ಟಿಲೇರಿದೆ.

ಪಿ.ಡೀಕಯ್ಯರವರು 2022ರ ಜುಲೈ 9ರಂದು ರಕ್ತದೊತ್ತಡ ಹೆಚ್ಚಾಗಿ,ಮನೆಯಲ್ಲಿ ಕುಸಿದು ಬಿದ್ದು ಬಳಿಕ ಮೆದುಳು ನಿಷ್ಕೃಯಗೊಂಡು ಮಣಿಪಾಲ ಕೆಎಂ‌ಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು‌. ಆದರೆ ಇವರ ತಲೆಯ ಹಿಂಬದಿಯಲ್ಲಿ ಕಾಣಿಸಿಕೊಂಡ ಬಲವಾದ ಏಟಿನ ಗಾಯ ಸಾಕಷ್ಟು ಅನುಮಾನವನ್ನು ಸೃಷ್ಟಿಸಿತ್ತು. ಹೀಗಾಗಿ ಪಿ.ಡೀಕಯ್ಯರವರ ಕುಟುಂಬಸ್ಥರು ದಫನದ ಬಳಿಕ ಮತ್ತೆ ಮೃತ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಆದರೆ ಪೊಲೀಸರು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದು, ಇದೀಗ ಈ ಪ್ರಕರಣ ಅಪರಾಧ ತನಿಖಾ ಇಲಾಖೆಯನ್ನು ಸೇರಲಿದೆ.ಆದರೆ ಈ ಪ್ರಕರಣ ಇನ್ನಷ್ಟೆ ಸಿಐಡಿಗೆ ಹಸ್ತಾಂತರ ಆಗಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಭಗವಾನ್ ಸೋನವಾಣೆ ತಿಳಿಸಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!