ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಪಾಲಿಕೆ ರಸ್ತೆಗೆ ಸುಂದರರಾಮ್ ಶೆಟ್ಟಿ ಹೆಸರು ಅಭಿನಂದನೆ ಸಲ್ಲಿಸಿದ ಡಾ.ಡಿ.ಹೆಗ್ಗಡೆ

ಪಾಲಿಕೆ ರಸ್ತೆಗೆ ಸುಂದರರಾಮ್ ಶೆಟ್ಟಿ ಹೆಸರು ಅಭಿನಂದನೆ ಸಲ್ಲಿಸಿದ ಡಾ.ಡಿ.ಹೆಗ್ಗಡೆ

ಬೆಳ್ತಂಗಡಿ: ವಿಜಯಾ ಬ್ಯಾಂಕ್‍ನ ಸ್ಥಾಪಕಾಧ್ಯಕ್ಷರಾದ ಮೂಲ್ಕಿ  ಸುಂದರ ರಾಮ ಶೆಟ್ಟಿಯವರ ಹೆಸರನ್ನು ಮಂಗಳೂರು ಮಹಾನಗರ ಪಾಲಿಕೆಯ ರಸ್ತೆಗೆ  ಮರುನಾಮಕರಣ ಮಾಡಿದ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮಹಾನಗರ ಪಾಲಿಕೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಮೂಲ್ಕಿ ಶ್ರೀ ಎಂ.ಸುಂದರ್ ರಾಮ್ ಶೆಟ್ಟಿಯವರ ಜೊತೆಗೆ ನಾನು ಕೆಲವು ವರ್ಷಗಳಲ್ಲಿ ವಿಜಯಾ ಬ್ಯಾಂಕ್‍ನ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೆ. ಶ್ರೀಯುತರ  ತೀಕ್ಷ್ಣಮತಿ, ಬ್ಯಾಂಕ್ ಮತ್ತು ಇನ್ಸುರೆನ್ಸ್ ಬಗ್ಗೆ ಮಾಹಿತಿ, ಶೀಘ್ರ ನಿರ್ಧಾರ ಪ್ರಸಿದ್ಧವಾದದ್ದು. ಬ್ಯಾಂಕ್‍ನ ಅಧ್ಯಕ್ಷರಿಗಿದ್ದ ಸ್ವಾತಂತ್ರ್ಯವನ್ನು ಬಳಸಿ ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ನೀಡಿದರು. ಭಾರತ ದೇಶದ ಎಲ್ಲಾ ರಾಜ್ಯಗಳಲ್ಲೂ ಶಾಖೆಗಳನ್ನು ತೆರೆದು ಗಮನಾರ್ಹ ಪ್ರಗತಿಯನ್ನು ಸಾಧಿಸಿದರು. ಎಂದ ಅವರು ಇಂದು ವಿಜಯಾ ಬ್ಯಾಂಕ್ ಬ್ಯಾಂಕ್ ಆಫ್ ಬರೋಡದೊಂದಿಗೆ ಲೀನವಾಗಿ ತನ್ನ ಹೆಸರು ಮರೆ ಮಾಚಿ ಹೋದಾಗ  ಅವರ ಹೆಸರು ರಸ್ತೆಗೆ ನಾಮಕರಣ ಮಾಡಿರುವುದು ಅತ್ಯಂತ ಸೂಕ್ತವಿದೆ. ನಮ್ಮೆಲ್ಲರಿಗೂ ಸಂತೋಷವಾಗಿದೆ. ಈ ಕಾರ್ಯ ಮಾಡಿದ ಮಂಗಳೂರು ಮಹಾನಗರ ಪಾಲಿಕೆಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!