ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕಬಡ್ಡಿ ಆಟಗಾರ ಸಂದೀಪ್ ಕುಲಾಲ್ ಅನಾರೋಗ್ಯದಿಂದ ನಿಧನ:

ಕಬಡ್ಡಿ ಆಟಗಾರ ಸಂದೀಪ್ ಕುಲಾಲ್ ಅನಾರೋಗ್ಯದಿಂದ ನಿಧನ:

 

 

ಬೆಳ್ತಂಗಡಿ:   ವ್ಯಕ್ತಿಯೊಬ್ಬರು  ಅಲ್ಪ ಕಾಲದ ಅನಾರೋಗ್ಯದಿಂದ   ಸಾವನ್ನಪ್ಪಿದ ಘಟನೆ ನಡೆದಿದೆ. ಲಾಯಿಲ ಗ್ರಾಮದ ವಿವೇಕಾನಂದ ನಗರದ ಸೋಮಣ್ಣ ಕುಂಬಾರ ಎಂಬವರ ಪುತ್ರ  ಸಂದೀಪ್ ಕುಲಾಲ್  (28) ಎಂಬವರು ಕಳೆದ ಕೆಲವು ದಿನಗಳ ಹಿಂದೆ  ಜಾಂಡೀಸ್  ಬಂದಿದ್ದು, ಅದಕ್ಕೆ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರು, ಅದರೆ ಕಳೆದ ಎರಡು ದಿನಗಳಿಂದ ಮತ್ತೆ ಜ್ವರ ಉಲ್ಬಣಗೊಂಡು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ವೃತ್ತಿಯಲ್ಲಿ ಅಲ್ಯೂಮಿನಿಯಂ ಪ್ಯಾಬ್ರಿಕೇಶನ್ ಕೆಲಸ ಮಾಡುತಿದ್ದ ಅವರು ಕಬಡ್ಡಿ ಆಟಗಾರರಾಗಿದ್ದಲ್ಲದೇ ಹಲವಾರು ಸಂಘ ಸಂಸ್ಥೆಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡು ತುಂಬಾ ಕ್ರೀಯಶೀಲ ವ್ಯಕ್ತಿಯಾಗಿದ್ದರು. ಅಲ್ಲದೇ ಎಲ್ಲರಲ್ಲೂ ಆತ್ಮೀಯತೆಯಿಂದ ಇರುತಿದ್ದರು.ಮೃತ ಸಂದೀಪ್ ಅವರಿಗೆ 5 ತಿಂಗಳ ಹಸುಗೂಸು ಇದ್ದು, ತಂದೆ, ತಾಯಿ , ಅಣ್ಣ , ಪತ್ನಿ , ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!