ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕುವೆಟ್ಟು ವ್ಯಾಪ್ತಿಯಲ್ಲಿ ಹೈಮಾಸ್ಕ್ ದೀಪಗಳ ಲೋಕಾರ್ಪಣೆ

ಕುವೆಟ್ಟು ವ್ಯಾಪ್ತಿಯಲ್ಲಿ ಹೈಮಾಸ್ಕ್ ದೀಪಗಳ ಲೋಕಾರ್ಪಣೆ

ಕುವೆಟ್ಟು: ಸಬರಬೈಲು: ಸಬರಬೈಲು ಶಾಲೆ ಬಳಿಯ ಹೈಮಾಸ್ಕ್ ದೀಪವನ್ಷು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ ಹಿರಿಯರಾದ ಕ್ರಷ್ಣ ರೈ, ಬೂತ್ ಸಮಿತಿ ಅಧ್ಯಕ್ಷ ಮನೋಹರ ಕೇದಳಿಕೆ, ಪದ್ಮನಾಭ ಶೆಟ್ಟಿ ಅರ್ಕಜೆ, ರಾಜುದ್ದೀನ್ ಸಬರಬೈಲು, ಜಯರಾಮ್ ಬಂಗೇರ ಬಳ್ಪುಂಜ ಮತ್ತಿತರರು ಉಪಸ್ಥಿತರಿದ್ದರು. ಎರಂಗಲ್ಲು: ಕುವೆಟ್ಟು ಗ್ರಾಮದ ಎರಂಗಲ್ಲು ಬಳಿ ಹೈಮಾಸ್ಕ್ ದೀಪವನ್ನು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿ. ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ಹಿರಿಯರಾದ ರಾಮಣ್ಣ ಪೂಜಾರಿ ನ್ಯಾಯದಕಲ, ಬೂತ್ ಸಮಿತಿಯ ಅಧ್ಯಕ್ಷ ಕಿಶೋರ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಪಿಲಿಚಾಮುಂಡಿ ದೈವಸ್ಥಾನದ ಬಳಿ: ಮದ್ದಡ್ಕ ತಾಯಿ ಪಿಲಿಚಾಮುಂಡಿ ದೈವಸ್ಥಾನದ ಬಳಿ ಹೈಮಾಸ್ಟ್ ದೀಪವನ್ನು ಶಾಸಕ ಹರೀಶ್ ಪೂಂಜಾ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿ. ಪಂ. ಸದಸ್ಯೆ ಮಮತಾ ಎಂ. ಶೆಟ್ಟಿ, ದೈವಸ್ಥಾನ ಅರ್ಚಕ ಶ್ರೀನಿವಾಸ ಅಮ್ಮಣ್ಣಾಯ, ಪ್ರಭಾಕರ ಶೆಟ್ಟಿ ಉಪ್ಪಡ್ಕ, ರಾಜ್ ಪ್ರಕಾಶ್ ಪಡ್ಡೈಲು, ಬೂತ್ ಸಮಿತಿ ಅಧ್ಯಕ್ಷ ಜಯರಾಮ ಕಿನ್ನಿಗೋಳಿ ಮತ್ತಿತರರು ಉಪಸ್ಥಿತರಿದ್ದರು. ಮದ್ದಡ್ಕ ಮಸೀದಿ ಬಳಿ: ಮದ್ದಡ್ಕ ಮಸೀದಿ ಆವರಣದಲ್ಲಿ ನಿರ್ಮಾಣಗೊಂಡ ಹೈಮಾಸ್ಕ್ ಲೈಟ್ ದೀಪವನ್ನು ಶಾಸಕ ಶ್ರೀ ಹರೀಶ್ ಪೂಂಜ ಅವರು ಉದ್ಘಾಟಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!