Home › ಕಾರ್ಮಿಕರ ಸಮಸ್ಯೆ ಪರಿಹರಿಸಲು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣರಿಗೆ ಮನವಿ
ಕಾರ್ಮಿಕರ ಸಮಸ್ಯೆ ಪರಿಹರಿಸಲು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣರಿಗೆ ಮನವಿ
ONLINE PUDU / Friday, November 13, 2020
ಬೆಂಗಳೂರು: ಪ್ರತಿಷ್ಠಿತ ಕಿರ್ಲೋಸ್ಕರ್ ಸಂಸ್ಥೆಯು ಉತ್ಪಾದನಾ ಘಟಕ ಸ್ಥಗಿತಗೊಳಿಸಿದ್ದರಿಂದ ಕಾರ್ಮಿಕರ ಉದ್ಯೋಗ ಅಸ್ಥಿರವಾಗಿದೆ. ಈ ಸಮಸ್ಯೆ ಶೀಘ್ರ ಬಗೆಹರಿಸುವಂತೆ ಕೋರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಉಪ ಮುಖ್ಯಮಂತ್ರಿ ಹಾಗೂ ಅಶ್ವಥ್ ನಾರಾಯಣ್ ಅವರಿಗೆ ಮನವಿ ಮಾಡಿದರು.
ಪ್ರತಿಷ್ಠಿತ ಕಿರ್ಲೋಸ್ಕರ್ ಸಂಸ್ಥೆ ಉತ್ಪಾದನಾ ಘಟಕ ಸ್ಥಗಿತಗೊಳಿಸಿ ಲಾಕೌಟ್ ಮಾಡಿದೆ, ಇದರಿಂದಾಗಿ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಉದ್ಯೋಗ ಅಸ್ಥಿರ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಮಾಹಿತಿ ನೀಡಿ, ಕಾರ್ಮಿಕರ ಸಮಸ್ಯೆ ಸೂಕ್ತವಾಗಿ ಬಗೆಹರಿಸಿ ಕೊಡುವಂತೆ ಶಾಸಕ ಹರೀಶ್ ಪೂಂಜ ಮನವಿ ಮಾಡಿದರು.