[embedyt] https://www.youtube.com/watch?v=Z9O-4XFlEZU[/embedyt]
ಬೆಂಗಳೂರು: ಧ್ರುವ ಸರ್ಜಾ ತಮ್ಮ ಪೊಗರು ಚಿತ್ರಕ್ಕಾಗಿ ಉದ್ದ ಕೂದಲು ಬಿಟ್ಟಿದ್ದು, ಇದೀಗ ಹೇರ್ ಕಟ್ ಮಾಡಿಸಿಕೊಳ್ಳುವ ಸಂದರ್ಭ ತಮ್ಮ ಕೂದಲನ್ನು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ವಿಗ್ ಮಾಡಿಸುವ ಸಲುವಾಗಿ ದಾನ ನೀಡುವ ಜೊತೆಗೆ ಈ ರೀತಿ ಕೂದಲು ದಾನ ಮಾಡಿ ಎಂದು ಸಂದೇಶ ಸಾರುವ ಮೂಲಕ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.ಸಾರ್ವಜನಿಕರು ಹಾಗೂ ಅಭಿಮಾನಿಗಳು ಹೇರ್ ಕಟ್ ಮಾಡುವ ಸಂದರ್ಭ ಇದೇ ರೀತಿ ಮಾಡಿದರೆ ತುಂಬಾ ಜನರಿಗೆ ಸಹಾಯವಾಗುತ್ತೆ ಎಂದು ಸಂದೇಶವನ್ನೂ ಸಮಾಜಕ್ಕೆ ತಿಳಿಸಿದ್ದಾರೆ. ಸಧ್ಯ ಧ್ರುವ ಸರ್ಜಾ ಅವರು ಅಪೊಗರು ಚಿತ್ರೀಕರಣ ಮುಗಿಸಿದ್ದು, ದುಬಾರಿ ಚಿತ್ರದ ಮುಹೂರ್ತ ನಡೆಸಿದ್ದಾರೆ, ಮುಂದೆ ದುಬಾರಿ ಶೂಟಿಂಗ್‍ನಲ್ಲಿ ಬ್ಯೂಸಿಯಾಗಲಿದ್ದಾರೆ.
ಇವರ ಈ ಮಾನವೀಯ ಸಂದೇಶ ಜನ ಮೆಚ್ಚುಗೆಗೆ ಪಾತ್ರವಾಗಿದೆ.