Home › ಪುತ್ತೂರು ಪ್ರೆಸ್ ಕ್ಲಬ್: ನೂತನ ಅಧ್ಯಕ್ಷರಾಗಿ ಶ್ರವಣ್ ಕುಮಾರ್ ನಾಳ ಆಯ್ಕೆ
ಪುತ್ತೂರು ಪ್ರೆಸ್ ಕ್ಲಬ್: ನೂತನ ಅಧ್ಯಕ್ಷರಾಗಿ ಶ್ರವಣ್ ಕುಮಾರ್ ನಾಳ ಆಯ್ಕೆ
ONLINE PUDU / Saturday, November 07, 2020
ಪುತ್ತೂರು: ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಶ್ರವಣ್ ಕುಮಾರ್ ನಾಳ ಆಯ್ಕೆಯಾದರು. ಈ ಬಾರಿ ಸಂಘ 25 ವರ್ಷ ಪೂರ್ಣಗೊಳಿಸುತ್ತಿರುವುದರಿಂದ ಚುನಾವಣಾ ಕಣದಲ್ಲಿ ತೀವ್ರ ಕುತೂಹಲ ಮೂಡಿತ್ತು.
ಚುನಾವಣಾಧಿಕಾರಿ ಹಿರಿಯ ಪತ್ರಕರ್ತರಾದ ಬಿ.ಟಿ. ರಂಜನ್ ಅವರ ಸಮ್ಮುಖದಲ್ಲಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಉಪಾಧ್ಯಕ್ಷರಾಗಿ ಸರ್ವೇಶ್ ಮತ್ತು ಅನೀಶ್ ಕುಮಾರ್, ಕಾರ್ಯದರ್ಶಿಯಾಗಿ ಸಂದೀಪ್ ಜೈನ್, ಜತೆ ಕಾರ್ಯದರ್ಶಿಯಾಗಿ ಅಜಿತ್, ಕೋಶಾಧಿಕಾರಿಯಾಗಿ ಕೃಷ್ಣಪ್ರಸಾದ್ ಆಯ್ಕೆಯಾದರು.