Home › ಬೆಳ್ತಂಗಡಿ ಜೈನ್ ಮಿಲನ್: ನೂತನ ಪದಾಧಿಕಾರಿಗಳ ಪದಗ್ರಹಣ
ಬೆಳ್ತಂಗಡಿ ಜೈನ್ ಮಿಲನ್: ನೂತನ ಪದಾಧಿಕಾರಿಗಳ ಪದಗ್ರಹಣ
ONLINE PUDU / Wednesday, November 11, 2020
ಬೆಳ್ತಂಗಡಿ: ಭಾರತೀಯ ಜೈನ್ ಮಿಲನ್ ವಲಯ 8ರ ಬೆಳ್ತಂಗಡಿ ಶಾಖೆಯ 2020-22ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉಜಿರೆ ಶ್ರೀ ಧ. ಮಂ. ಪದವಿಪೂರ್ವ ಕಾಲೇಜಿನ ರತ್ನತ್ರಯ ಸಭಾಭವನದಲ್ಲಿ ನಡೆಯಿತು.
ವಲಯದ ಉಪಾದ್ಯಕ್ಷ ಬಿ. ಸುದರ್ಶನ್ ಜೈನ್, ಜೈನ್ ಮಿಲನ್ ಕಾರ್ಯಕ್ರಮಗಳ ಕುರಿತು ಮಾರ್ಗದರ್ಶನ ನೀಡಿದರು.
ವಲಯ 8ರ ನಿರ್ದೇಶಕ ಬಿ. ಸೋಮಶೇಖರ ಶೆಟ್ಟಿ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ, ಕರ್ತವ್ಯಗಳ ಕುರಿತು ತಿಳಿಸಿದರು.
ಅಧ್ಯಕ್ಷತೆಯನ್ನು ಪಾರ್ಶ್ವನಾಥ್ ಜೈನ್ ವಹಿಸಿದ್ದರು. ನೂತನ ಅಧ್ಯಕ್ಷರಾಗಿ ಎನ್. ಶಾಂತಿರಾಜ್ ಜೈನ್, ಕಾರ್ಯದರ್ಶಿಯಾಗಿ ಸಂಪತ್ ಕುಮಾರ್, ಉಪಾಧ್ಯಕ್ಷರಾಗಿ ಕೆ ಉದಯ್ ಕುಮಾರ್ ಕಂಬಳಿ, ಸಿದ್ಧಾಂತ ಕೀರ್ತಿರಾಜ್, ಶಕುಂತಳಾ, ಜೊತೆ ಕಾರ್ಯದರ್ಶಿಯಾಗಿ ಅಜಯ್ ಕುಮಾರ್ ಜೈನ್, ಕೋಶಾಧಿಕಾರಿಯಾಗಿ ನಿಖಿತ್ ಜೈನ್ ಧರ್ಮಸ್ಥಳ ಪ್ರಮಾಣ ವಚನ ಸ್ವೀಕರಿಸಿದರು. ಗೌರವ ಸಲಹೆಗಾರರಾಗಿ ಅನಂತ್ ರಾಜ್ ಜೈನ್, ಬಿ. ಭುಜಬಲಿ, ಎನ್. ಜೀವಂಧರ್ ಕುಮಾರ್, ಪ್ರೊ. ತ್ರಿಶಲಾ ಜೈನ್, ಪೊ. ದಿನೇಶ್ ಚೌಟ, ಡಾ. ಎಸ್. ಸತೀಶ್ಚಂದ್ರ ಆಯ್ಕೆಯಾದರು. ಪ್ರವೀಣ್ ಕುಮಾರ್ ಇಂದ್ರ, ಡಾ.ಎ. ಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯದರ್ಶಿ ಬಿ. ಮುನಿರಾಜ್ ಅಜ್ರಿ ಕಾರ್ಯಕ್ರಮ ನಿರೂಪಿಸಿ, ಸಂಪತ್ ಕುಮಾರ್ ವಂದಿಸಿದರು.