Home › 'ಮಲೆನಾಡ ಮಾಣಿಕ್ಯ' ಹರೀಶ್ ಪೂಂಜ: ಹೊನ್ನಾಳಿಯ ಸಮಾಜ ಸೇವಕರಿಂದ ಗೌರವ ಸಮರ್ಪಣೆ
'ಮಲೆನಾಡ ಮಾಣಿಕ್ಯ' ಹರೀಶ್ ಪೂಂಜ: ಹೊನ್ನಾಳಿಯ ಸಮಾಜ ಸೇವಕರಿಂದ ಗೌರವ ಸಮರ್ಪಣೆ
ONLINE PUDU / Friday, November 13, 2020
ಬೆಳ್ತಂಗಡಿ: ಕೋವಿಡ್ 19ನಂತಹ ಕಠಿಣ ಪರಿಸ್ಥಿತಿಯಲ್ಲಿ ತಾಲೂಕಿನ ಗ್ರಾಮಗಳಿಗೆ ಭೇಟಿ ನೀಡಿ. ಬಡವರ ಕಷ್ಟಗಳಿಗೆ ಸ್ಪಂದಿಸಿದ ಶಾಸಕ ಹರೀಶ್ ಪೂಂಜ ಅವರ ಕಾರ್ಯವೈಖರಿ ಗಮನಿಸಿ ಹೊನ್ನಾಳಿಯ ಸಮಾಜ ಸೇವಕರಾದ ಧನಂಜಯ್ ಜೈನ್ ಅವರು 'ಮಲೆನಾಡ ಮಾಣಿಕ್ಯ' ಎಂದು ಗೌರವಿಸಿದ್ದಾರೆ.
ಸಂಕಷ್ಟದ ಸಂದರ್ಭದಲ್ಲಿ 241ಬೂತ್ ಗೆ ಆಹಾರ ಪೊಟ್ಟಣವನ್ನು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ತಲುಪುವಂತೆ ಮಾಡಿದ್ದು, ಅವರ ಕಾರ್ಯವೈಖರಿಯನ್ನು ಮೆಚ್ಚಿ, ಹೊನ್ನಾಳಿಯ ಸಮಾಜ ಸೇವಕರಾದ ಧನಂಜಯ್ ಜೈನ್ ಅವರು ಶಾಸಕರನ್ನು 'ಶ್ರಮಿಕ' ಕಚೇರಿಯಲ್ಲಿ ಸನ್ಮಾನಿಸಿದರು.
ಈ ಸಂಧರ್ಬದಲ್ಲಿ ಎಳನೀರಿನ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಜೈನ್ ಉಪಸ್ಥಿತರಿದ್ದರು.