ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮೂಲ್ಯರ ಯಾನೆ ಕುಲಾಲರ ಸಂಘ ನಾವೂರು: ಪ್ರಥಮ ಮಾಸಿಕ ಸಭೆ

ಮೂಲ್ಯರ ಯಾನೆ ಕುಲಾಲರ ಸಂಘ ನಾವೂರು: ಪ್ರಥಮ ಮಾಸಿಕ ಸಭೆ

ನಾವೂರು: ನಾವೂರು ಮೂಲ್ಯರ ಯಾನೆ ಕುಲಾಲರ ಸಂಘದ ಪ್ರಥಮ ಮಾಸಿಕ ಸಭೆ ನಾವೂರು ಕುಲಾಲ ಕಟ್ಟಡದ ಸಭಾಂಗಣದಲ್ಲಿ ನಡೆಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಸದಾನಂದ ಮೂಲ್ಯ ನಾವೂರು ಇವರು ವಹಿಸಿ ವೇದಿಕೆಯಲ್ಲಿ ಗ್ರಾಮದ ಗುರಿಕಾರ ಸುಂದರ ಮೂಲ್ಯ ಭೀಮಂಡೆ, ಯುವ ವೇದಿಕೆಯ ಅಧ್ಯಕ್ಷರಾದ ರಾಜ್ ಕುಮಾರ್ ಲಾಯಿಲ, ಕುಂಭಶ್ರೀ ಮಹಿಳಾ ಸಂಘದ ಅಧ್ಯಕ್ಷರಾದ ಶಶಿಕಲಾ ನಾರಾಯಣ ಮೂಲ್ಯ ಕಣಾಲು, ಸ್ವ.ಸ. ಸಂಘಗಳ ಒಕ್ಕೂಟದ ಅಧ್ಯಕ್ಷರಾದ ನಾರಾಯಣ ಮೂಲ್ಯ ಕಣಾಲು ಅದೇ ರೀತಿ ಕುಲಾಲ ಸಂಘದ ಜತೆ ಕಾರ್ಯದರ್ಶಿ ಮಹೇಶ್ ಕುಲಾಲ್ ಕರ್ಮಿನಡ್ಕ, ತಾಲೂಕು ಸಂಘದ ನಿರ್ದೇಶಕರಾದ ಪುಷ್ಪರಾಜ್ ಲಾಯಿಲ ಉಪಸ್ಥಿತರಿದ್ದರು. ಕುಲಾಲ ಸಂಘದ ಗ್ರಾಮ ಸಮಿತಿಯಲ್ಲಿ ಸಂಘ ಬಲವರ್ಧನೆಯ ಬಗ್ಗೆ ಚರ್ಚಿಸಲಾಯಿತು. ಮುಂದಿನ ದಿನದಲ್ಲಿ ಕ್ರೀಡಾಕೂಟ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಲೆಕ್ಕಪತ್ರಗಳನ್ನು ಕಳೆದ ಸಮಿತಿಯ ಕಾರ್ಯದರ್ಶಿಗಳು ನೀಡಿದರು. ಸಭೆಯಲ್ಲಿ ಗ್ರಾಮಸಮಿತಿಯ ಎಲ್ಲ ಪಧಾಧಿಕಾರಿಗಳು ಹಾಜರಿದ್ದು ಸುಧೀರ್ಘ ಚರ್ಚೆ ನಡೆಸಿ ಸಮಸ್ತ ಕುಲಾಲ ಬಾಂಧವರ ಏಳಿಗೆಗೆ ಶ್ರಮಿಸುವ ಬಗ್ಗೆ ತೀರ್ಮಾನಿಸಲಾಯಿತು. ಸಭೆಯನ್ನು ತಾಲೂಕು ನಿರ್ದೇಶಕ ಪುಷ್ಪರಾಜ್ ಲಾಯಿಲ ನಿರೂಪಿಸಿ, ಸತೀಶ್ ಕುಲಾಲ್ ಬಾಳ್ತರ ಸ್ವಾಗತಿಸಿ ವಿಜಯ್ ಕುಲಾಲ್ ಸುದೆಬರಿ ವಂದಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!