ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉಜಿರೆ ಕೇಂದ್ರ ಜುಮ್ಮಾ ಮಸ್ಜಿದ್ ಪ್ರಧಾನ ಧರ್ಮಗುರು ಅಬ್ದುಲ್ ರಝಕ್ ಸಖಾಫಿ ನಿಧನ

ಉಜಿರೆ ಕೇಂದ್ರ ಜುಮ್ಮಾ ಮಸ್ಜಿದ್ ಪ್ರಧಾನ ಧರ್ಮಗುರು ಅಬ್ದುಲ್ ರಝಕ್ ಸಖಾಫಿ ನಿಧನ

ಬೆಳ್ತಂಗಡಿ: ರಾಜ್ಯದ ಹಿರಿಯ ವಿದ್ವಾಂಸರಲ್ಲೋರ್ವರಾಗಿದ್ದ ಉಜಿರೆ ಹಳೇಪೇಟೆ ಮುಹ್ಯುದ್ದೀನ್ ಜುಮ್ಮಾ ಮಸ್ಜಿದ್‌ನ ಪ್ರಧಾನ ಧರ್ಮಗುರುಗಳಾಗಿದ್ದ ಅಬ್ದುಲ್ ರಝಕ್ ಸಖಾಫಿ ಕಳಂಜಿಬೈಲು(೫೨) ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪುತ್ತಿಲ ಗ್ರಾಮದ ಕಲ್ಲಕಟ್ಟ ನಿವಾಸಿಯಾದ ಇವರು ಕರ್ನಾಟಕ ರಾಜ್ಯ ಸಖಾಫೀಸ್ ಕೌನ್ಸಿಲ್‌ನ ಬೆಳ್ತಂಗಡಿ ತಾ. ಸಮಿತಿ ನಿರ್ದೇಶಕರಾಗಿದ್ದರು. ಕೇರಳದ ಕಲ್ಲಿಕೋಟೆ ಮರ್ಕಝ್ ಅಂತಾರಾಷ್ಟ್ರೀಯ ವಿದ್ಯಾ ಸಂಸ್ಥೆಯಲ್ಲಿ ಧಾರ್ಮಿಕ ಸಖಾಫಿ ಪದವಿ ಪಡೆದಿದ್ದ ಅವರು, ದಿವಂಗತ ಬೇಕಲ್ ಉಸ್ತಾದರ ಶಿಷ್ಯರಲ್ಲಿ ಓರ್ವರಾಗಿದ್ದ ಇವರು ಪೇರಮುಗರು, ಪುತ್ತಿಗೆ, ಸುಳ್ಯದ ಎಲಿಮಲೆ, ನೆಲ್ಯಾಡಿ ಮೊದಲಾದ ಮುದರ್ರಿಸರಾಗಿ ಕರ್ತವ್ಯ ನಿರ್ವಹಿಸಿ ಕಳೆದ ಎರಡು ತಿಂಗಳಿನಿಂದೀಚೆಗೆ ಉಜಿರೆ ಕೇಂದ್ರ ಮಸ್ಜಿದ್‌ನಲ್ಲಿ ಮುದರ್ರಿಸರಾಗಿದ್ದರು.

ಮೃತರು ಪತ್ನಿ, ಪುತ್ರ, ಮೂವರು ಪುತ್ರಿಯರು ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!