ಸೀಮೆಯ ಹಾಗೂ ಸೀಮೆಯ ಹೊರಗಿನ ಜನತೆ ಸೇರಿಕೊಂಡು ರಜತ ಮಹೋತ್ಸವ ಆಚರಣಾ ಸಮಿತಿ ರಚಿಸಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಸಂಘಟಿಸಿದ್ದಾರೆ. ಸಮಿತಿಯವರು ಮಾತ್ರವಲ್ಲದೆ, ಸೀಮೆಯ ಎಲ್ಲಾ ಜನಗಳ ಸಹಕಾರದೊಂದಿಗೆ ಅರುವದ ಹೆಸರು ಉಳಿದಿದೆ. ಇವರೆಲ್ಲರ ಸಹಕಾರದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕೆಲವು ಕಟ್ಟು ಕಟ್ಟಳೆಗಳ ಕಾರ್ಯಕ್ರಮಗಳು ಅರಸುಗಳ ಜೊತೆಗೆ ಸೀಮೆಯ ಜನರ ಸಹಕಾರವೂ ಅಗತ್ಯ. ಸೀಮೆಯ ಜನತೆಯ ಸಹಕಾರದೊಂದಿಗೆ ಇನ್ನಷ್ಟು ಕಾರ್ಯಕ್ರಮ ಮಾಡಲು ಉತ್ಸಾಹ ತುಂಬಿದೆ. ಸುಮಾರು 30 ವರ್ಷಗಳ ಹಿಂದೆ, ನನ್ನ ತಂದೆಯವರಿದ್ದ ಕಾಲದಲ್ಲಿ ಧರ್ಮನೇಮ ನಡೆಸಿಕೊಟ್ಟಿದ್ದರು. ಪಟ್ಟಾಧಿಕಾರಿಯಾಗಿ 25 ವರ್ಷಗಳು ಪೂರೈಸಿದ ಹಿನ್ನೆಲೆ ಆ ಧರ್ಮನೇಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಪಟ್ಟದ ದೈವಗಳಾದ ಮೂಜಿಲ್ನಾಯ ಹಾಗೂ ಕೊಡಮಣಿತ್ತಾಯ ವಿಜೃಂಭನೆಯಿಂದ ನೇಮ ನಡೆಸಲು ಉದ್ದೇಶಿಸಲಾಗಿದೆ ಎಂದರು.
Home › ಸೀಮೆಯ ಜನರ ಸಹಕಾರದಿಂದ ಅರಮನೆ ಕಾರ್ಯಚಟುವಟಿಕೆ: ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ ಅಜಿಲ ಅಭಿಮತ