ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಬೆಳ್ತಂಗಡಿ: ನೂತನ ಪದಾಧಿಕಾರಿಗಳ ಆಯ್ಕೆ: ತಾಲೂಕು ಶಾಖೆ ಪ್ರಥಮ ಮಹಾಸಭೆ

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಬೆಳ್ತಂಗಡಿ: ನೂತನ ಪದಾಧಿಕಾರಿಗಳ ಆಯ್ಕೆ: ತಾಲೂಕು ಶಾಖೆ ಪ್ರಥಮ ಮಹಾಸಭೆ

ಬೆಳ್ತಂಗಡಿ: ನಗರದ ಅಂಬೇಡ್ಕರ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತಾಲೂಕು ಘಟಕದ ಪ್ರಥಮ ಮಹಾಸಭೆ ಡಿ.20 ರಂದು ನಡೆಯಿತು.

ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಮಿತಿ ಸದಸ್ಯ ಯತೀಶ್ ಬೈಕಂಪಾಡಿ ಮತ್ತು ಜಿಲ್ಲಾ ಸದಸ್ಯ ರವೀಂದ್ರ ವೀಕ್ಷಕರಾಗಿ ಭಾಗವಹಿಸಿದ್ದರು.

ವಿನಾಯಕ್ ರಾವ್ ಕನ್ಯಾಡಿ ಸಭೆ ಉದ್ಘಾಟಿಸಿದರು. ರಾಜ್ಯ ಘಟಕದ ಕಾರ್ಯಕಾರಿ ಮಂಡಳಿ ಸದಸ್ಯ ಯತೀಶ್ ಬೈಕಂಪಾಡಿ ಸಂಸ್ಥೆಯ ಧ್ಯೇಯ, ಉದ್ದೇಶ ಹಾಗೂ ಕರ್ತವ್ಯಗಳನ್ನು ಸದಸ್ಯರಿಗೆ ತಿಳಿಸಿದರು. ಜಿಲ್ಲಾ ಕಾರ್ಯಕಾರಿ ಮಂಡಳಿ ಸದಸ್ಯ ರವೀಂದ್ರ ಸಂಸ್ಥೆಯ ನಿಯಮಾವಳಿಗಳ ಬಗ್ಗೆ ವಿವರಿಸಿದರು..

ಈ ವೇಳೆ ಪದಾಧಿಕಾರಿಗಳ ಆಯ್ಕೆ ನಡೆಯಿತು. ಬೆಳ್ತಂಗಡಿ ತಾಲೂಕು ಶಾಖೆಗೆ ಅಧ್ಯಕ್ಷರಾಗಿ ತಹಶೀಲ್ದಾರ್ ಬೆಳ್ತಂಗಡಿ, ಚೇರ್ಮನ್ ಆಗಿ ಹರಿದಾಸ್ ಎಸ್. ಎಂ.,‌ ಪ್ರಧಾನ ಕಾರ್ಯದರ್ಶಿಯಾಗಿ ಯಶವಂತ ಪಟವರ್ಧನ್‌, ವೈಸ್ ಚೇರ್ಮನ್ ಆಗಿ ಜಾನ್ ಅರ್ವಿನ್ ಡಿಸೋಜ, ಕೋಶಾಧಿಕಾರಿಯಾಗಿ ಚಂದ್ರಕಾಂತ ಕಾಮತ್‌ ಅವರನ್ನು ಆರಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ. ಬಿ ಯಶೋವರ್ಮ, ಡಾ.‌ಪ್ರಮೋದ್ ಆರ್ ನಾಯ್ಕ್, ಶಿವಕುಮಾರ್ ಎಸ್.ಎಂ, ವಿನಾಯಕ್ ರಾವ್ ಕನ್ಯಾಡಿ, ರಾಮಚಂದ್ರ ಶೆಣೈ, ಡಾ.‌ಶಿವಾನಂದ ಸ್ವಾಮಿ, ಡಾ.‌ಶ್ರೀ ಹರಿ, ಸುಜಿತ್ ರಾವ್ ಉಜಿರೆ, ಸುಕನ್ಯಾ ಹೆಚ್., ಪರಿಮಳ ಎಂ.ವಿ, ಆಶಾ ಸುಜಿತ್, ಸಂಜೀವ, ಕೃಷ್ಣಪ್ಪ‌ ಗುಡಿಗಾರ, ಹೈದರ್ ಮರ್ದಾಳ, ಎಂ.ಶರೀಫ್ ಬೆರ್ಕಳ ಇವರು ಆಯ್ಕೆಯಾದರು. ಕಾರ್ಯದರ್ಶಿ ಜಾನ್ ಅರ್ವಿನ್ ಡಿಸೋಜ ಪ್ರಸ್ತಾವನೆಗೈದರು. ನೂತನ ಕಾರ್ಯದರ್ಶಿ ಯಶವಂತ ಪಟವರ್ಧನ್ ವಂದಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!