ಮಸ್ಜಿದ್‌ನ ಧಾರ್ಮಿಕ ವಕ್ಫ್ ನಿರ್ವಹಣೆಯನ್ನು ಕೂರತ್ ತಂಙಳ್ ನಡೆಸಿದರು. ಈ ವೇಳೆ ಕೂರತ್ ತಂಙಳ್ ಅವರನ್ನು ಜಮಾಅತ್ ನ ಖಾಝಿಯಾಗಿ ಹಾಗೂ ಸಯ್ಯಿದ್ ಸಾದಾತ್ ತಂಙಳ್ ರನ್ನು ಸಹಾಯಕ ಖಾಝಿಯಾಗಿ ಅನುಮೋದಿಸಲಾಯಿತು. ಅಧ್ಯಕ್ಷತೆಯನ್ನು ಮಸ್ಜಿದ್ ಅಧ್ಯಕ್ಷ ಅಬ್ದುಲ್ ಹಮೀದ್ ಟಿ. ವಹಿಸಿದ್ದರು.
ಸಮಾರಂಭದಲ್ಲಿ ಸಯ್ಯಿದ್ ಮುರ ತಂಙಳ್, ಸಯ್ಯಿದ್ ಕಾಜೂರು ತಂಙಳ್, ಸಯ್ಯಿದ್ ಇಸ್ಮಾಯಿಲ್ ತಂಙಳ್, ಸಯ್ಯಿದ್ ಜಿಫ್ರಿ ತಂಙಳ್, ಸಯ್ಯಿದ್ ತೀರ್ಥಹಳ್ಳಿ ತಂಙಳ್, ಗಣ್ಯರಾದ ನಝೀರ್ ಮುಸ್ಲಿಯಾರ್, ಅಬ್ದುಲ್ ಹಮೀದ್ ಫೈಝಿ ಕಿಲ್ಲೂರು, ಎನ್.ಕೆ. ಹಸೈನಾರ್ ಮುರ, ಮರ್ಕಝ್ ಆರ್‌ಸಿಎಫ್‌ಐ ಪ್ರಮುಖರಾದ ರಶೀದ್ ಪುಣ್ಣಶ್ಶೇರಿ, ಮನ್ನಾಫ್, ಶಿಫಾಫ್, ಫಿರೋಝ್, ತಸ್ಲೀಂ ಸಖಾಫಿ ಮತ್ತು ವಝೀರ್, ಹಾಜಿ ಎಚ್.ಕೆ. ಇಸ್ಮಾಯಿಲ್, ಹಬೀಬ್ ಸಾಹೇಬ್ ನಡ, ಕೆ.ಯು. ಇಬ್ರಾಹಿಂ ಕಾಜೂರು, ಯಾಕೂಬ್ ಮುಸ್ಲಿಯಾರ್ ಗುರುವಾಯನಕೆರೆ, ಅಬ್ದುರ್ರಹ್ಮಾನ್ ಸುನ್ನತ್‌ಕೆರೆ, ಹಾಜಿ ಯಾಕೂಬ್ ಕನ್ಯಾಡಿ, ಇಬ್ರಾಹಿಂ ಸಿ.ಎಂ, ಕುಂಞಿಮೋನು ಕೇಳ್ತಾಜೆ, ಸಿದ್ದೀಕ್ ಉರುವಾಲ್‌ಪದವು ಮೊದಲಾದವರು ಉಪಸ್ಥಿತರಿದ್ದರು. ಹಾಜಿ ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರು ಸ್ವಾಗತಿಸಿದರು. ಮುಹಮ್ಮದ್ ಫಾರಿಸ್ ಖಿರಾಅತ್ ಪಠಿಸಿದರು.
ಬಾಕ್ಸ್; ನೂತನ ಮಸ್ಜಿದ್‌ನ ಪ್ರಥಮ ಖುತುಬ ಪಾರಾಯಣವನ್ನು ಸಾದಾತ್ ತಂಙಳ್ ನೆರವೇರಿಸಿದರೆ, ಜುಮಾ ನಮಾಝ್‌ಗೆ ಕೂರತ್ ತಂಙಳ್ ನೇತೃತ್ವ ನೀಡಿದರು. ಖಾಝಿ ಸ್ವೀಕಾರದ ಬಳಿಕ ಇಬ್ಬರನ್ನೂ ನಿಲುವಂಗಿ ತೊಡಿಸಿ ವಿಶೇಷವಾಗಿ ಗೌರವಿಸಲಾಯಿತು.