ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ವಾಹನ‌ ಸವಾರರೇ ದಾರಿ‌ ಬಿಡಿ, ಜೀವ ರಕ್ಷಣೆಗಾಗಿ ಸಹಕರಿಸಿ: ಪುತ್ತೂರಿನಿಂದ ಉಜಿರೆ ಮಾರ್ಗವಾಗಿ ಬೆಂಗಳೂರಿಗೆ ಹಾದು ಹೋಗಲಿದೆ ತುರ್ತು ಅಂಬುಲೆನ್ಸ್

ವಾಹನ‌ ಸವಾರರೇ ದಾರಿ‌ ಬಿಡಿ, ಜೀವ ರಕ್ಷಣೆಗಾಗಿ ಸಹಕರಿಸಿ: ಪುತ್ತೂರಿನಿಂದ ಉಜಿರೆ ಮಾರ್ಗವಾಗಿ ಬೆಂಗಳೂರಿಗೆ ಹಾದು ಹೋಗಲಿದೆ ತುರ್ತು ಅಂಬುಲೆನ್ಸ್

 

 

 

 

 

 

ಪುತ್ತೂರು: ಶ್ವಾಸಕೋಶದ ತುರ್ತು ಶಸ್ತ್ರಚಿಕಿತ್ಸೆಗಾಗಿ ಪುತ್ತೂರಿನ ಮಹಾವೀರ ಖಾಸಗಿ ಆಸ್ಪತ್ರೆಯಿಂದ ಸುಹಾನ ಎಂಬ 22 ವರ್ಷದ ರೋಗಿಯೊಬ್ಬರನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಡಿ.2ರಂದು ಅಂದರೆ ಇಂದು ಬೆಳಗ್ಗೆ 11 ಗಂಟೆಗೆ ಕರೆದೊಯ್ಯಲಾಗುತ್ತಿದೆ. ಆಂಬುಲೆನ್ಸ್ ಹಾದು ಹೋಗುವ ಮಾರ್ಗ: ಕೆಎ 51 ಎಬಿ 7860 ನೋಂದಾವಣೆಯ ಆಂಬ್ಯುಲೆನ್ಸ್ ನಲ್ಲಿ ಉಪ್ಪಿನಂಗಡಿ, ಗುರುವಾಯನಕೆರೆ, ಬೆಳ್ತಂಗಡಿ, ಉಜಿರೆ, ಚಾರ್ಮಾಡಿ, ಬೇಲೂರು ಹಾಸನ ಮಾರ್ಗವಾಗಿ ಬೆಂಗಳೂರು ತೆರಳಲಿದೆ. ಪುತ್ತೂರು ಆಸ್ಪತ್ರೆಯಿಂದ ಉಪ್ಪಿನಂಗಡಿ- ಗುರುವಾಯನಕೆರೆ-ಬೆಳ್ತಂಗಡಿ- ಉಜಿರೆ- ಚಾರ್ಮಾಡಿ- ಬಣಕಲ್ ಹ್ಯಾಂಡ್ ಪೋಸ್ಟ್- ಗೋಣಿಬೀಡು- ಬೇಲೂರು- ಹಾಸನ- ಯಶವಂತಪುರ- ಹೆಬ್ಬಾಳ -ರಾಂಮೂರ್ತಿನಗರ- ಟಿನ್ ಫ್ಯಾಕ್ಟರಿ- ಮಹದೇವಪುರ ವೈದೇಹಿ ಆಸ್ಪತ್ರೆಗೆ ತೆರಳಲಿದೆ. ಸಹಕರಿಸಿ: ಬೆಂಗಳೂರು ಕೆಎಂಸಿಸಿ ಆಂಬುಲೆನ್ಸ್ ನಲ್ಲಿ ಎಮರ್ಜೆನ್ಸಿ ಅಲರ್ಟ್ ಮೂಲಕ ಕರೆದುಕೊಂಡು ಹೋಗಲಾಗುವುದು. ಆದ್ದರಿಂದ ಈ ರಸ್ತೆಯ ಮೂಲಕ ಹಾದು ಹೋಗುವ ಎಲ್ಲಾ ವಾಹನ ಚಾಲಕರು ಹಾಗೂ ಸಾರ್ವಜನಿಕರು, ಜನ ಸ್ನೇಹಿಗಳು ಅಂಬುಲೆನ್ಸ್ ಹಾದು ಹೋಗುವಾಗ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿ ಪ್ರಜಾಪ್ರಕಾಶ ತಂಡ ವಿನಂತಿಸುತ್ತಿದ್ದೇವೆ. ಬೇಕಾಗಿದೆ ದಾನಿಗಳ ಸಹಾಯ ಹಸ್ತ: ಬಡ ಕುಟುಂಬದಲ್ಲಿರುವ ಈ ಕುಟುಂಬ ಈಗಾಗಲೇ ಅರ್ಥಿಕ ಸಂಕಷ್ಟದಲ್ಲಿದೆ‌. ಈಗಾಗಲೇ ಹಲವು ಆಸ್ಪತ್ರೆಗಳಲ್ಲಿ ದಾನಿಗಳು  ಹಾಗೂ ಅಯುಷ್ಮಾನ್ ಯೋಜನೆಯ ಮೂಲಕ ಚಿಕಿತ್ಸೆ ನೀಡಿದರೂ ಶ್ವಾಸಕೋಶದ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ. ಸುಮಾರು 32 ಲಕ್ಷ ರೂಪಾಯಿ ಶಸ್ತ್ರಚಿಕಿತ್ಸೆ ಹಾಗೂ ಚಿಕಿತ್ಸೆಗೆ ಖರ್ಚು ತಗುಲಬಹುದೆಂದು ವೈದ್ಯರು ಹೇಳಿದ್ದಾರೆ. ಅದ್ದರಿಂದ ಬಡ ಕುಟುಂಬಕ್ಕೆ ಬೇಕಾಗಿದೆ ಮಾನವೀಯ ಸಹಾಯ ಈ ಕಾರ್ಯಕ್ಕೆ ಎಲ್ಲರೂ ಸಹಕರಿಸೋಣ. ಈ ಬಡ ಕುಟುಂಬದ ಕಣ್ಣೀರು ಓರೆಸುವ ಮೂಲಕ ಅವರ ಕಷ್ಟಕ್ಕೆ ಸ್ಪಂದಿಸೋಣ. ಸಹಾಯ ಹಸ್ತ ನೀಡುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ನೀಡಬಹುದು. Bank: Karnataka Bank Name: Suhana Tarannum AC No: 0072500105751201 IFSC Code: KARB0000007 Branch: Arehally Google pay & Phone Pay 9481770280

 

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!