ಭಾನುವಾರ ಹೆಚ್ಚಿನ ವಾಹನಸಂದಣಿ ಇದ್ದ ಕಾರಣ ವಾಹನಗಳ ಸರತಿ ಸಾಲು ಕಂಡುಬಂದಿತು.
ಅರಣ್ಯ, ಮೆಸ್ಕಾಂ ಇಲಾಖೆಗಳು ಮುಂಡಾಜೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಸ್ಥಳೀಯರು ಮರವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಮರ ಬಿದ್ದು, ವಿದ್ಯುತ್ ಕಂಬವೊಂದು ಮುರಿದ ಹಿನ್ನೆಲೆ ಮೆಸ್ಕಾಂ ಇಲಾಖೆ ತಾತ್ಕಲಿಕವಾಗಿ ಬದಲಿ ವಿದ್ಯುತ್ ವ್ಯವಸ್ಥೆ ಕಲ್ಪಿಸಿ ಆ ಭಾಗದ ಜನರಿಗೆ ವಿದ್ಯುತ್ ತೊಂದರೆಯನ್ನು ಸರಿಪಡಿಸಿದೆ.