ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ರಿಕ್ಷಾ-ಓಮ್ನಿ ಅಪಘಾತ: ಓರ್ವ ಮೃತ್ಯು, ಐವರಿಗೆ ಗಾಯ

ರಿಕ್ಷಾ-ಓಮ್ನಿ ಅಪಘಾತ: ಓರ್ವ ಮೃತ್ಯು, ಐವರಿಗೆ ಗಾಯ

ಬೆಳ್ತಂಗಡಿ: ಅಳದಂಗಡಿ ಸನಿಹದ ಕೆದ್ದು ಎಂಬಲ್ಲಿ ರಿಕ್ಷಾ ಹಾಗು ಓಮ್ನಿ ಮುಖಾಮುಖಿ ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಇತರ ಐವರು ಗಾಯಗೊಂಡಿರುವ ಘಟನೆ ನಡೆದಿದೆ.

ಪಿಲ್ಯ ಕಡೆಯಿಂದ ಗುರುವಾಯನಕೆರೆ ಕಡೆಗೆ ಬರುತ್ತಿದ್ದ ಆಪೆ ರಿಕ್ಷಾ ಹಾಗು ಗುರುವಾಯನಕೆರೆಯಿಂದ ಶಿವಮೊಗ್ಗ ಕಡೆಗೆ ಹೋಗುತ್ತಿದ್ದ ಕಾರು ಪರಸ್ಪರ ಡಿಕ್ಕಿಯಾಗಿ ಆಟೋದಲ್ಲಿದ್ದ ಪಿಲ್ಯ ನಿವಾಸಿ ಭುಜಬಲಿ ಹೆಗ್ಡೆ (60) ತೀವ್ರ ಗಾಯಗೊಂಡಿದ್ದರು. ಕೂಡಲೇ ಆಸ್ಪತ್ರೆಗೆ ಕೊಂಡೊಯ್ದರೂ, ದಾರಿ ಮಧ್ಯೆ ಮೃತಪಟ್ಟರು.

ಆಟೋ ಚಾಲಕ ಶಶಿಧರ ಹಾಗು ಆಟೋದಲ್ಲಿದ್ದ ಮೃತರ ಪತ್ನಿ ಲಲಿತಾ ಗಂಭೀರ ಗಾಯಗೊಂಡಿದ್ದಾರೆ. ಅವರ ಪುತ್ರ ಅಭಿಜಿತ್ ಅವರೂ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಓಮ್ನಿಯಲ್ಲಿದ್ದ ಉಷಾ ಹಾಗು ನಾಗಭೂಷಣ ಅವರು ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ರಭಸಕ್ಕೆ ರಿಕ್ಷಾ ಹಾಗು ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!