ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಲಯನ್ಸ್ “ಜನಪದ ವೈಭವ”: ವಿವಿಧ ಸ್ಪರ್ಧೆಗಳಿಗೆ‌ ಆಹ್ವಾನ

ಲಯನ್ಸ್ “ಜನಪದ ವೈಭವ”: ವಿವಿಧ ಸ್ಪರ್ಧೆಗಳಿಗೆ‌ ಆಹ್ವಾನ

ಬೆಳ್ತಂಗಡಿ: ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್‌ನ 2020-21ರ ಜಿಲ್ಲಾ ಸಾಂಸ್ಕೃತಿಕ ಕಾರ್ಯಕ್ರಮ “ಜನಪದ ವೈಭವ”ವನ್ನು ಫೆ. 21ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ನಡೆಯಲಿದ್ದು, ವೈಯಕ್ತಿಕ ವಿಭಾಗದಲ್ಲಿ‌ ನಡೆಯುವ ಸ್ಪರ್ಧೆಗಳಿಗೆ ಪ್ರವೇಶ ಆಹ್ವಾನಿಸಲಾಗುತ್ತಿದೆ‌ ಎಂದು ಲಯನ್ಸ್ ಜಿಲ್ಲಾ ಜಾನಪದ ವೈಭವ ಸ್ಪರ್ಧೆ ಜಿಲ್ಲಾ ಸಂಯೋಜಕ ಲ| ನಿತ್ಯಾನಂದ ನಾವರ ತಿಳಿಸಿದ್ದಾರೆ.

ಬೆಳ್ತಂಗಡಿ ವಾರ್ತಾಭವನದಲ್ಲಿ‌ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.

ಸ್ಪರ್ಧೆಯು ಹತ್ತು ವಿಭಾಗಳಲ್ಲಿ ಯಾವುದೇ ವಯೋಮಿತಿ ಇಲ್ಲದೆ‌ ಸಾರ್ವಜನಿಕರಿಗೆ ‌ಮುಕ್ತವಾಗಿ ನಡೆಯಲಿದೆ. ಗೀಗೀ ಪದ, ಜನಪದ ಗೀತೆ, ತುಳು ಪಾಡ್ದನ, ಆಟಿ ಕಳೆಂಜ, ಗುಮ್ಮಟೆ, ಕೊಂಬು ಊದುವಿಕೆ, ತಾಸೆ ಬಡಿಯುವಿಕೆ, ವಾದ್ಯ ನುಡಿಸುವಿಕೆ, ತೆಂಬರೆ ಬಡಿಯುವಿಕೆ, ಪಿಲಿನಲಿಕೆ ವೈಯಕ್ತಿಕ ಸ್ಪರ್ಧೆಗಳಾಗಿದ್ದು, ಆಸಕ್ತರು ಜ. 31 ಆದಿತ್ಯವಾರದೊಳಗೆ ತಮ್ಮ ಹೆಸರನ್ನು ಲ| ಕೆ. ಕೃಷ್ಣ ಆಚಾರ್ಯ ಉಜಿರೆ 9449079754, ಲ| ಧರಣೇಂದ್ರ ಕೆ. ಜೈನ್ ಗುರುವಾಯನಕೆರೆ 9448180439 ಇವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು ನೋಂದಾಯಿಸಿಕೊಳ್ಳಬಹುದು. ಪರಿಕರಗಳನ್ನು ಸ್ಫರ್ಧಾಳುಗಳೇ ತರಬೇಕು. ಕಾಲಾವಕಾಶ 3 ನಿಮಿಷ ಮಾತ್ರ. ತೀರ್ಪುಗಾರರ ತೀರ್ಮಾನವೇ ಅಂತಿಮ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮ ಸಹ ಸಂಯೋಜಕ ಲ| ವಸಂತ ಶೆಟ್ಟಿ, ಲ| ಧರಣೇಂದ್ರ‌ ಕುಮಾರ್ ಜೈನ್ ಪೂರಕ‌ ಮಾಹಿತಿ ನೀಡಿದರು. ಲ.‌ದತ್ತಾತ್ರೇಯ ಗೊಲ್ಲ ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!