ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಕಾಜೂರು ಉರೂಸ್ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಭೇಟಿ

ಕಾಜೂರು ಉರೂಸ್ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಭೇಟಿ

ಬೆಳ್ತಂಗಡಿ; ಸರ್ವದರ್ಮೀಯ ಕಾಜೂರು ಮಖಾಂ ಶರೀಫ್ ಉರೂಸ್ ಮುಬಾರಕ್ ಫೆ. 19 ರಂದು ಆರಂಭಗೊಂಡಿದ್ದು, ಫೆ.‌25 ರಂದು ಅಧ್ಯಾತ್ಮಿಕ ಅನುಭೂತಿಯ ಬೃಹತ್ ದಿಕ್ರ್ ಮಜ್ಲಿಸ್‌ಗೆ ಪ್ರಧಾನ ಅತಿಥಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ, ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ‌ ಉಸ್ತಾದ್ ಆಗಮಿಸಲಿದ್ದಾರೆ.

ಖಾಝಿ, ಕರ್ನಾಟಕ ಉಲಮಾ ಒಕ್ಕೂಟದ ಅಧ್ಯಕ್ಷ ಝೈನುಲ್ ಉಲಮಾ ಮಾಣಿ ಉಸ್ತಾದ್‌ ದಿಕ್ರ್ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಅನೇಕ‌ ಮಂದಿ ಸಯ್ಯಿದರುಗಳು, ವಿದ್ವಾಂಸರುಗಳು ಪಾಲ್ಗೊಳ್ಳಲಿದ್ದಾರೆ.

ಧಾರ್ಮಿಕ ಉಪನ್ಯಾಸ ನಡೆಯುತ್ತಿದ್ದು, ಪೇರೋಡ್ ಉಸ್ತಾದ್, ಶಾಫಿ‌ ಸ‌ಅದಿ, ಝೈನಿ ಕಾಮಿಲ್ ಸಖಾಫಿ‌ ಮೊದಲಾದವರು ಆಗಮಿಸಲಿದ್ದಾರೆ.

ಸರ್ವ ಧರ್ಮೀಯ ಸಭೆಯಲ್ಲಿ ಶಾಸಕರುಗಳು ಸಹಿತ ಗಣ್ಯರುಗಳು ಭಾಗವಹಿಸಲಿದ್ದಾರೆ.

ಸಯ್ಯಿದ್ ಕುಂಬೋಳ್‌ ತಂಙಳ್, ಸಯ್ಯಿದ್ ಕೂರತ್ ತಂಙಳ್, ಸಯ್ಯಿದ್ ಕಾಜೂರು ತಂಙಳ್ ಮಾರ್ಗದರ್ಶನದಲ್ಲಿ ಫೆ. 28 ರಂದು ಈ‌ ವರ್ಷದ ಉರೂಸ್ ಸಮಾರೋಪ ಜರುಗಲಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!