ದ.ಕ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಪಿ.ಕೆ. ಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.
ದ.ಕ ಜಿಲ್ಲಾ ಸರಕಾರಿ ಗ್ರೂಪ್ ಡಿ ನೌಕರರ ಸಂಘದ ಅಧ್ಯಕ್ಷ ಪ್ರವೀಣ್ ಎಸ್. ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ರಾಜ್ಯ ಸರಕಾರಿ ನೌಕರರ ಸಂಘದ ಪ್ರಭಾರ ಅಧ್ಯಕ್ಷ ಜಯರಾಜ್ ಜೈನ್, ದ.ಕ ಜಿಲ್ಲಾ ಸರಕಾರಿ ಗ್ರೂಪ್ ಡಿ ನೌಕರರ ಸಂಘದ ಮಾಜಿ ಅಧ್ಯಕ್ಷ ಫ್ರಾಂಕಿ ಪ್ರಾನ್ಸಿಸ್ ಕುಟಿನ್ಹ, ಮಾಜಿ ಪ್ರಧಾನ ಕಾರ್ಯದರ್ಶಿ ಸಿರಿಲ್ ರಾಬರ್ಟ್ ಡಿ’ಸೋಜ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ಎಂ.ಎಸ್., ದ.ಕ. ಜಿಲ್ಲಾ ಸರಕಾರಿ ಗ್ರೂಪ್ ಡಿ ನೌಕರರ ಸಂಘ ಬೆಳ್ತಂಗಡಿ ಶಾಖೆಯ ನೂತನ ಅಧ್ಯಕ್ಷ ಕೃಷ್ಣ ಪೂರ್ಜೆ ಧರ್ಮಸ್ಥಳ, ಉಪಾಧ್ಯಕ್ಷೆ ಕವಿತಾ ಭಜಂತ್ರಿ, ಕಾರ್ಯದರ್ಶಿ ಶಾಂತಪ್ಪ ಬಿ. ಅಳಗುಂಡಿ ಹಾಗೂ ಇತರ ಪದಾಧಿಕಾರಿಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.