ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ದೇಶಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸೈನಿಕ ಯತೀಂದ್ರ

ದೇಶಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸೈನಿಕ ಯತೀಂದ್ರ

ಬೆಳ್ತಂಗಡಿ: ಕಡಿರುದ್ಯಾವರ ಮಠ ಹೊಸಮನೆ ರಮಣಿ ಮತ್ತು ಜಗದೀಶ್ ಪೂಜಾರಿ ದಂಪತಿ ಪುತ್ರ ಯತೀಂದ್ರ ಪೂಜಾರಿ ಅವರು 17 ವರ್ಷಗಳ ಕಾಲ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದರು.

ಸೇನಾ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 2004ರಲ್ಲಿ ಸೇನೆ ಸೇರಿದ್ದರು‌. ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್, ಅಸ್ಸಾಂ,‌ ರಾಜಸ್ಥಾನ, ದೆಹಲಿ, ಪಂಜಾಬ್‌ ಮತ್ತು ಬೆಂಗಳೂರು ಮೊದಲಾದ ಪ್ರದೇಶಗಳಲ್ಲಿ ದೇಶಸೇವೆ ಮಾಡಿದ್ದಾರೆ.

ಪ್ರಾಥಮಿಕ ಶಿಕ್ಷಣವನ್ನು ಸ್ವ-ಗ್ರಾಮದಲ್ಲಿ ಪೂರೈಸಿ, ವೇಣೂರಿನಲ್ಲಿ ಐಟಿಐ ಶಿಕ್ಷಣ ಪಡೆದಿದ್ದರು.

ಯತೀಂದ್ರ ಅವರಿಗೆ ಜಯಚಿತ್ರಾ ಹಾಗೂ ರಾಜಶ್ರೀ ಎಂಬ ಇಬ್ಬರು ಸಹೋದರಿಯರಿದ್ದು, ವಿವಾಹಿತರಾಗಿದ್ದಾರೆ. ಇವರ ಸಹೋದರ ಯತೀಶ್ ಹೆಚ್.ಜೆ. ಅವರು ಪ್ರಗತಿಪರ ಕೃಷಿಕರಾಗಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!