ಒಂದು ಹಂತದಲ್ಲಿ ಶೇ 99 ಮಣ್ಣು ತೆರವು ಕೆಲಸ ಮುಗಿದಿದ್ದರೂ ಯಾವುದೇ ಸುಳಿವು ದೊರೆಯದ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವ ಬಗ್ಗೆ ಜಿಲ್ಲಾಡಳಿತ ಚಿಂತನೆ ನಡೆಸಿತ್ತು ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಾಹಿತಿಯನ್ನೂ ನೀಡಿದ್ದರು. ಅದರೆ ಇನ್ನೂ ಒಂದು ವಾರ ಕಾರ್ಯಚರಣೆ ನಡೆಸಿ ನಂತರ ಸ್ಥಗಿತಗೊಳಿಸುವ ಬಗ್ಗೆ ತಿರ್ಮಾನಿಸಿ ಕಾರ್ಯಚರಣೆ ಮುಂದುವರಿಸಲಾಗಿತ್ತು. ಇದೀಗ ಕಾರ್ಯಚರಣೆ ಯಶಸ್ವಿಯಾಗಿದೆ. ಮೃತ ದೇಹ ಪತ್ತೆಯಾಗಿದೆ.
ಹಲವು ಅನುಮಾನಗಳಿಗೆ ಹಾಗೂ ಕುತೂಹಲಗಳಿಗೆ ತೆರೆ ಬಿದ್ದಿದೆ. ಕಳೆದ 22 ದಿನಗಳಿಂದ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲರ ಪ್ರಯತ್ನಕ್ಕೆ ಫಲ ದೊರಕಿದೆ.