Home › ಮಗನನ್ನು ಹುಡುಕಿಕೊಡಿ, ಮನೆಯವರ ಆಕ್ರಂದನ: ಪತ್ತೆಯಾಗಲೇ ಇಲ್ಲ ವಿದ್ಯಾರ್ಥಿಯ ದೇಹ: ಬಂಗಾರ್ ಪಲ್ಕೆ ದುರಂತ ನಡೆದು ಏಳು ದಿನ ಕಳೆದರೂ ಸಿಗದ ಸುಳಿವು
ಮಗನನ್ನು ಹುಡುಕಿಕೊಡಿ, ಮನೆಯವರ ಆಕ್ರಂದನ: ಪತ್ತೆಯಾಗಲೇ ಇಲ್ಲ ವಿದ್ಯಾರ್ಥಿಯ ದೇಹ: ಬಂಗಾರ್ ಪಲ್ಕೆ ದುರಂತ ನಡೆದು ಏಳು ದಿನ ಕಳೆದರೂ ಸಿಗದ ಸುಳಿವು
ONLINE PUDU / Monday, February 01, 2021
ಬೆಳ್ತಂಗಡಿ: ಕಳೆದ ಜ. 25 ರಂದು ಮಲವಂತಿಗೆ ಗ್ರಾಮದ ಎಳನೀರು ಸಮೀಪದ ಬಂಗಾರ್ ಪಲ್ಕೆ ಎಂಬಲ್ಲಿ ಫಾಲ್ಸ್ ವೀಕ್ಷಣೆ ತೆರಳಿದವರ ಮೇಲೆ ಗುಡ್ಡ ಕುಸಿತ ಉಂಟಾಗಿ ನಾಪತ್ತೆಯಾಗಿದ್ದ ಉಜಿರೆ ಕಾಶಿಬೆಟ್ಟುವಿನ ವಿದ್ಯಾರ್ಥಿ ಸನತ್ ಸುಳಿವು ಏಳು ದಿನವಾದರೂ ಪತ್ತೆಯಾಗದಿರುವುದು ಅತಂಕಕ್ಕೆ ಕಾರಣವಾಗಿದೆ. ಈಗಾಗಲೇ ಮನೆಯವರ ಅಕ್ರಂದನ ಮುಗಿಲು ಮುಟ್ಟಿದೆ, "ನನ್ನ ಮಗನನ್ನು ಹುಡುಕಿಕೊಡಿ" ಎಂದು ತಂದೆ ತಾಯಿ ಗೋಗರೆಯುತಿದ್ದಾರೆ. ಕಾರ್ಯಚರಣೆ ಎಂಟನೇ ದಿನವೂ ಮುಂದುವರಿದಿದ್ದು, ಇವತ್ತಾದರೂ ಸುಳಿವು ಪತ್ತೆಯಾಗಲಿ ಎಂದು ಎಲ್ಲರೂ ಬೇಡಿಕೊಳ್ಳುತಿದ್ದಾರೆ.