ಸುಬ್ರಹ್ಮಣ್ಯ ಸಮೀಪದ ಕೈಕಂಬ ರೇಗಪ್ಪ ಎಂಬವರ ಮನೆಯ ನಾಯಿಯನ್ನು ಚಿರತೆ ಅಟ್ಟಾಡಿಸಿಕೊಂಡು ಬಂದಾಗ ನಾಯಿಯು ಶೌಚಾಲಯದ ಒಳಗೆ ಓಡಿದಾಗ ಚಿರತೆಯೂ ಅದನ್ನು ಹಿಂಬಾಲಿಸಿಕೊಂಡು ಶೌಚಾಲಯದ ಒಳಗಡೆ ಹೋಗಿದೆ. ಇದನ್ನು ಗಮನಿಸಿದ ಮನೆಯವರು ಹೊರಗಡೆಯಿಂದ ಬಾಗಿಲು ಹಾಕಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಯಾರೂ ಕೂಡ ಚಿರತೆಗೆ ಕಲ್ಲು ಹಾಗೂ ಬೊಬ್ಬೆ ಹೊಡೆಯುವುದನ್ನು ಮಾಡಿ ಕೆರಳಿಸಬಾರದು ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Home › ನಾಯಿಯೊಂದಿಗೆ ಶೌಚಾಲಯದಲ್ಲಿ ಬಂಧಿಯಾದ ಚಿರತೆ: ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ದೌಡು