Home › ದೀಕ್ಷಾ ಎಂ. ಶೆಟ್ಟಿ ಅವರಿಗೆ 2020-21ನೇ ಸಾಲಿನ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪ್ರದಾನ
ದೀಕ್ಷಾ ಎಂ. ಶೆಟ್ಟಿ ಅವರಿಗೆ 2020-21ನೇ ಸಾಲಿನ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪ್ರದಾನ
ONLINE PUDU / Wednesday, March 10, 2021
ಬೆಳ್ತಂಗಡಿ: ಬಹುಮುಖ ಪ್ರತಿಭೆ, ಯಕ್ಷಗಾನ, ಪೂಜಾ ಕುಣಿತ ಸೇರಿದಂತೆ ಹಲವು ಕಲಾ ಪ್ರಕಾರಗಳಲ್ಲಿ ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸಿರುವ ದೀಕ್ಷಾ ಎಂ. ಶೆಟ್ಟಿ ಕಾಟಿಪಳ್ಳ ಅವರು ಕರ್ನಾಟಕ ಸರ್ಕಾರದ 2020-21ನೇ ಸಾಲಿನ ಪ್ರತಿಷ್ಠಿತ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಮಾ.10ದು ಬುಧವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಇವರು ಎಸ್. ಮಾಧವ ಶೆಟ್ಟಿ ಬಾಳ, ಯಕ್ಷವೈಭವ ಕಾಟಿಪಳ್ಳ ಹಾಗೂ ಮೀರಾವಾಣಿ ಎಂ. ಶೆಟ್ಟಿ ಜಪ್ಪುಗುಡ್ಡೆ ಗುತ್ತು ಇವರ ಪುತ್ರಿಯಾಗಿದ್ದಾರೆ.