ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ನಾಪತ್ತೆಯಾದ ಯುವತಿಯ ಶವ ಕಾಡಲ್ಲಿ ಪತ್ತೆ

ನಾಪತ್ತೆಯಾದ ಯುವತಿಯ ಶವ ಕಾಡಲ್ಲಿ ಪತ್ತೆ

ನೆರಿಯ: ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಶವವು ಕೊಲೋಡಿ ಸಮೀಪದ ಕಾಡಿನಲ್ಲಿ ಪತ್ತೆಯಾಗಿದೆ. ಕೊಲೋಡಿ ನಿವಾಸಿ ತೇಜಸ್ವಿನಿ(23) ಎಂಬ ಯುವತಿಯು ಕಳೆದ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದರು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಮೃತ ದೇಹವು ಕೊಲೋಡಿ ಸಮೀಪದ ಕಾಡಿನಲ್ಲಿ ಸ್ಥಳೀಯರು ಕಾಡಿಗೆ ಹೋದ ಸಂದರ್ಭದಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.

ನೆರಿಯ ಗ್ರಾಮದ ನಿವಾಸಿ ಮಂಜುನಾಥ ಮತ್ತು ಸುಶೀಲಾ ಕೆ ದಂಪತಿ ಪುತ್ರಿಯಾಗಿರುವ ತೇಜಸ್ವಿನಿ ಯವರು ನಾಲ್ಕು ವರ್ಷಗಳಿಂದ ಉಜಿರೆಯ ಮನೆಯೊಂದರಲ್ಲಿ ಮನೆಕೆಲಸ ಮಾಡಿಕೊಂಡು, ಕಂಪ್ಯೂಟರ್ ಶಿಕ್ಷಣ ಕಲಿಯುತಿದ್ದರು ಫೆ.22ರಂದು ಕಂಪ್ಯೂಟರ್ ಕ್ಲಾಸ್ ಮುಗಿಸಿ ನೆರಿಯದಲ್ಲಿರುವ ತನ್ನ ತಾಯಿ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವರು ಮರಳಿ ಬಾರದೆ, ನಾಪತ್ತೆಯಾಗಿದ್ದರು.

ತೇಜಸ್ವಿನಿ ಯವರು ಫೆ.22ರಂದು ಕಂಪ್ಯೂಟರ್ ಕ್ಲಾಸ್ ಮುಗಿಸಿ ಮನೆಗೆ ಹೊರಟವರು ಸಂಜೆ 4 ಗಂಟೆ ಸುಮಾರಿಗೆ ನೆರಿಯ ಗ್ರಾಮದ ಅಣಿಯೂರು ಎಂಬಲ್ಲಿ ಕೋಲೋಡಿ ಕಡೆಗೆ ನಡೆದುಕೊಂಡು ಹೋಗುತ್ತಿರುವ ವೇಳೆ ತನ್ನ ಅಕ್ಕ ಸುಮಂಗಳರವರಿಗೆ ಸಿಕ್ಕಿದ್ದು, ಆಕೆ ತಮ್ಮೊಟ್ಟಿಗೆ ಜೀಪಿನಲ್ಲಿ ತಂಗಿ ತೇಜಸ್ವಿನಿಯನ್ನು ಕರೆದುಕೊಂಡು ಹೋಗಿ ಮನೆಯ ಹತ್ತಿರ ಇಳಿಸಿ ಬಳಿಕ ಪತಿಯೊಂದಿಗೆ ತಮ್ಮ ಮನೆಗೆ ಹಿಂದಿರುಗಿದ್ದರು.

ಆದರೆ ರಾತ್ರಿ 7 ಗಂಟೆಯ ವರೆಗೂ ತೇಜಸ್ವಿನಿಯವರು ಉಜಿರೆಯ ಮನೆಗೆ ಮರಳಿ ಬಾರದೆ ಇರುವ ಬಗ್ಗೆ ಮನೆಯೊಡತಿ ಯುವತಿಯ ಮನೆಯವರಿಗೆ ಫೋನ್ ಕರೆ ಮೂಲಕ ತಿಳಿಸಿದ್ದರು. ಯುವತಿಯ ಮೊಬೈಲ್ ಕೂಡ ಸ್ವೀಚ್ ಆಫ್ ಆಗಿದ್ದು, ಅತ್ತ ತಾಯಿ ಮನೆಗೂ ಹೋಗದೆ ಇತ್ತ, ಕೆಲಸದ ಮನೆಗೂ ಬಾರದೇ ನಾಪತ್ತೆಯಾಗಿದ್ದರು.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಯುವತಿಯ ಪೋಷಕರು ದೂರು ನೀಡಿದ್ದು, ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇಂದು ಸ್ಥಳೀಯರು ಕಾಡಿಗೆ ಹೋದ ಸಂದರ್ಭದಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!