ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಉಜಿರೆ ಚಂದ್ರ ಮೋಹನ ರೈ ಅವರಿಗೆ ಬಂಟರ ಸಂಘದಿಂದ ನುಡಿ ನಮನ ಕಾರ್ಯಕ್ರಮ

ಉಜಿರೆ ಚಂದ್ರ ಮೋಹನ ರೈ ಅವರಿಗೆ ಬಂಟರ ಸಂಘದಿಂದ ನುಡಿ ನಮನ ಕಾರ್ಯಕ್ರಮ

ಗುರುವಾಯನಕೆರೆ: ಅಪಘಾತದಲ್ಲಿ ಸಾವನ್ನಪ್ಪಿದ ಕೊಡುಗೈ ದಾನಿ ಉಜಿರೆ ಚಂದ್ರಮೋಹನ ರೈ ಅವರಿಗೆ ಬೆಳ್ತಂಗಡಿ ತಾಲೂಕು ಬಂಟರ ಸಂಘದ ವತಿಯಿಂದ ನುಡಿ ನಮನ ಕಾರ್ಯಕ್ರಮವು ಗುರುವಾಯನಕೆರೆ ಬಂಟರ ಭವನದ ಹಾರಾಡಿ ಸಭಾಂಗಣದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪುಷ್ಪರಾಜ ಶೆಟ್ಟಿ ಬೆಳ್ತಂಗಡಿ, ಜಯರಾಮ ಶೆಟ್ಟಿ ಪಡಂಗಡಿ, ರಘರಾಮ ಶೆಟ್ಟಿ ಉಜಿರೆ, ಜಯಂತ ಶೆಟ್ಟಿ ಕುಂಟಿನಿ, ಜಯರಾಮ ಭಂಡಾರಿ ಧರ್ಮಸ್ಥಳ, ಪುಷ್ಪಾ .ಆರ್. ಶೆಟ್ಟಿ ಉಜಿರೆ, ಉಮೇಶ್ ಶೆಟ್ಟಿ ಉಜಿರೆ, ಪ್ರಕಾಶ್ ಶೆಟ್ಟಿ ನೊಚ್ಚ, ರಾಜು ಶೆಟ್ಟಿ ಬೆಂಗೆತ್ಯಾರ್ , ರಘುರಾಮ ಗಾಂಭೀರ್ ಸವಣಾಲ್ ,ಪ್ರಭಾಕರ ಶೆಟ್ಟಿ ಉಪ್ಪಡ್ಕ ಹಾಗೂ ಇತರ ಪದಾಧಿಕಾರಿಗಳು‌ ಬಂಟರ ಸಂಘಕ್ಕೆ ಹಿರಿಯರಾದ ಚಂದ್ರಮೋಹನ ರೈ ಅವರು ನೀಡಿದ ಪ್ರೋತ್ಸಾಹ ಕೊಡುಗೆ ಅದಲ್ಲದೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅರ್ಥಿಕ ಸಹಾಯ ಹಸ್ತ ಹಾಗೂ ಇನ್ನಿತರ ಸಂಘ ಸಂಸ್ಥೆಗಳಿಗೂ ಅವರು ನೀಡುತ್ತಿದ್ದ ಸಹಕಾರ ಹಾಗೂ ಪ್ರೋತ್ಸಾಹದ ಬಗ್ಗೆ ನೆನಪಿಸಿಕೊಂಡರು.ಅವರಂತಹ ಶಿಸ್ತುಬದ್ಧ ವ್ಯಕ್ತಿಯನ್ನು ಕಳೆದುಕೊಂಡದ್ದು ಬಂಟರ ಸಂಘಕ್ಕೆ ದೊಡ್ಡ ನಷ್ಟವಾಗಿದೆ. ಎಂದು ನುಡಿ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಚಂದ್ರಹಾಸ ಶೆಟ್ಟಿ ಬೊಳಂತೂರು ಹಾಗೂ ನಾರಾಯಣ ರೈ ಬೊಲ್ಲೊಟ್ಟು ಸವಣಾಲು ಇವರಿಗೂ ಚಿರಶಾಂತಿ ಕೋರಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪಧಾಧಿಕಾರಿಗಳು ಬಂಟ ಭಾಂದವರು ಹಾಗೂ ಅವರ ಮಗ ದುಷ್ಯಂತ್ ರೈ ಹಾಗೂ ಮಗಳು ಶಾಂತಲ ಶೆಟ್ಟಿ ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!