ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ರಾಷ್ಟ್ರೀಯ ಹೆದ್ದಾರಿಯಲ್ಲಿ ಡೀಸಲ್ ಸಾಗಾಟ ಲಾರಿ ಪಲ್ಟಿ:  ಉಪ್ಪಿನಂಗಡಿ, ಬೊಳ್ಳಾರ್ ಬಳಿ‌ ಘಟನೆ

ರಾಷ್ಟ್ರೀಯ ಹೆದ್ದಾರಿಯಲ್ಲಿ ಡೀಸಲ್ ಸಾಗಾಟ ಲಾರಿ ಪಲ್ಟಿ:  ಉಪ್ಪಿನಂಗಡಿ, ಬೊಳ್ಳಾರ್ ಬಳಿ‌ ಘಟನೆ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಮಂಗಳೂರು- ಬೆಂಗಳೂರು ‌ರಸ್ತೆಯ ಉಪ್ಪಿನಂಗಡಿ ಸಮೀಪದ ಬೊಳ್ಳಾರ್ ನಲ್ಲಿ ಮಾ.13ರಂದು ಡೀಸೆಲ್‌ ಸಾಗಾಟ ಲಾರಿ‌ ಪಲ್ಟಿಯಾದ ಘಟನೆ ನಡೆದಿದೆ.

ನಿಯಂತ್ರಣ ತಪ್ಪಿ ಡೀಸೆಲ್ ಟ್ಯಾಂಕರ್ ಮಗುಚಿ ಬಿದ್ದಿದ್ದು, ಚಾಲಕ ಮತ್ತು ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ.

ಅಪಘಾತ ಸಂದರ್ಭ ಟ್ಯಾಂಕರ್ ನಿಂದ ಡೀಸೆಲ್ ಸೋರಿಕೆಯಾಗತೊಡಗಿದ್ದು, ಡೀಸೆಲ್ ಕೊಂಡೊಯ್ಯಲು ಸ್ಥಳದಲ್ಲಿದ್ದವರು ಮುಗಿಬಿದ್ದಿದ್ದಾರೆ. ಈ‌ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಗಿದ್ದು, ಸಾರ್ವಜನಿಕರನ್ನು ಲಾಠಿ ಚಾರ್ಜ್ ಮಾಡಿ ಚದುರಿಸುವ ಮೂಲಕ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು.

ಪುತ್ತೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳದಲ್ಲಿದ್ದು, ‌ಸುಗಮ ಸಂಚಾರಕ್ಕೆ ‌ವ್ಯವಸ್ಥೆ ಮಾಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!