Home › ಕೊರೊನಾ 3ನೇ ಅಲೆಗೂ ಸಿದ್ಧರಾಗಿ: ಖ್ಯಾತ ವೈದ್ಯ ಡಾ. ದೇವಿ ಪ್ರಸಾದ್ ಶೆಟ್ಟಿ: 5 ಲಕ್ಷ ಐ ಸಿ ಯು ಹಾಸಿಗೆಗಳ ಅವಶ್ಯಕತೆ
ಕೊರೊನಾ 3ನೇ ಅಲೆಗೂ ಸಿದ್ಧರಾಗಿ: ಖ್ಯಾತ ವೈದ್ಯ ಡಾ. ದೇವಿ ಪ್ರಸಾದ್ ಶೆಟ್ಟಿ: 5 ಲಕ್ಷ ಐ ಸಿ ಯು ಹಾಸಿಗೆಗಳ ಅವಶ್ಯಕತೆ
ONLINE PUDU / Friday, April 30, 2021
ಬೆಂಗಳೂರು: ಮಹಾಮಾರಿ ಕೊರೊನಾ ಎರಡನೇ ಅಲೆಯ ಸೋಂಕು ಭಾರತದಲ್ಲಿ ದಿನಕ್ಕೆ ಸುಮಾರು 3.8 ಲಕ್ಷಕ್ಕಿಂತಲೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಈ ಸಂಖ್ಯೆ ಪ್ರತಿದಿನ ಗರಿಷ್ಠ 5 ಲಕ್ಷಕ್ಕೆ ಏರಬಹುದು. ಇನ್ನು ಮಾಧ್ಯಮಗಳಲ್ಲಿ ಐಸಿಯುಗಳಲ್ಲಿನ ರೋಗಿಗಳು ಆಮ್ಲಜನಕದ ಕೊರತೆಯಿಂದಾಗಿ ಸಾಯುತ್ತಿದ್ದಾರೆ ಎಂದು ಬರುತ್ತಿದೆ. ಇದು ಒಂದು ಕಡೆಯಾದರೆ ಮತ್ತೊಂದೆಡೆ ರೋಗಿಗಳನ್ನು ನೋಡಿಕೊಳ್ಳಲು ದಾದಿಯರು ಮತ್ತು ವೈದ್ಯರು ನಿರ್ದಿಷ್ಠ ಸಂಖ್ಯೆಯಲ್ಲಿಲ್ಲ ಸಾಂಕ್ರಾಮಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ ಎಂದು ನಾರಾಯಣ ಹೃದಯಾಲಯದ ಸಂಸ್ಥಾಪಕ ಖ್ಯಾತ ಹೃದಯ ಶಸ್ತ್ರಚಿಕಿತ್ಸಕ ಡಾ. ದೇವಿ ಪ್ರಸಾದ್ ಶೆಟ್ಟಿ ಹೇಳಿದ್ದಾರೆ
ಅವರು ಪುಣೆಯ ಸಿಂಬಯೋಸಿಸ್ ಗೋಲ್ಡನ್ ಜುಬಿಲಿ ಉಪನ್ಯಾಸ ಸರಣಿಯಲ್ಲಿ ತಮ್ಮ ಆನ್‌ಲೈನ್ ಭಾಷಣದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಮುಂದಿನ ಕೆಲವು ವಾರಗಳಲ್ಲಿ ಭಾರತಕ್ಕೆ ಹೆಚ್ಚುವರಿ 5 ಲಕ್ಷ ಐಸಿಯು ಹಾಸಿಗೆಗಳು, 2 ಲಕ್ಷ ದಾದಿಯರು ಮತ್ತು 1.5 ಲಕ್ಷ ವೈದ್ಯರ ಅಗತ್ಯವಿದೆ ಎಂದು ಹೇಳಿದ್ದಾರೆ.
ಭೀಕರ ಪರಿಸ್ಥಿತಿಯನ್ನು ಎದುರಿಸಲು ಆಮೂಲಾಗ್ರ ಪರಿಹಾರಗಳನ್ನು ಸಹ ಸೂಚಿಸಿದ್ದಾರೆ. ಪ್ರಸ್ತುತ, ಭಾರತದಲ್ಲಿ ಕೇವಲ 75,000 ರಿಂದ 90,000 ಐಸಿಯು ಹಾಸಿಗೆಗಳು ಮಾತ್ರ ಇವೆ. ಅದಾಗಲೇ ಬಹುತೇಕ ಎಲ್ಲಾ ಬೆಡ್ ಗಳು ಫುಲ್ ಆಗಿವೆ. ಇನ್ನು ಎರಡನೇ ಅಲೆ ಮಧ್ಯದ ಸ್ಥಿತಿಯಲ್ಲಿದ್ದು ಅದು ಉತ್ತುಂಗಕ್ಕೇರಿದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತದೆ ಎಂದರು.
ಕೋವಿಡ್ ಪಾಸಿಟಿವ್ ಬಂದ ಪ್ರತಿ ರೋಗಿಯ ಮನೆಯಲ್ಲಿ ಕನಿಷ್ಠ 5 ರಿಂದ 10 ಜನರಿರುತ್ತಾರೆ. ಆದರೆ ಅವರು ಪರೀಕ್ಷೆಗೆ ಒಳಗಾಗುವುದಿಲ್ಲ ಎಂದಿದ್ದಾರೆ.