ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಲಾಯ್ಲ ರಿಕ್ಷಾ ಅಪಘಾತ ಗಂಭೀರ ಗಾಯಗೊಂಡಿದ್ದ ಚಾಲಕ ಸಾವು

ಲಾಯ್ಲ ರಿಕ್ಷಾ ಅಪಘಾತ ಗಂಭೀರ ಗಾಯಗೊಂಡಿದ್ದ ಚಾಲಕ ಸಾವು

ಬೆಳ್ತಂಗಡಿ: ಕಳೆದ ಕೆಲವು ದಿನಗಳ ಹಿಂದೆ ಲಾಯಿಲ ಸಮೀಪದ ಪುತ್ರಬೈಲು ಎಂಬಲ್ಲಿ ವಿದ್ಯುತ್ ಕಂಬಕ್ಕೆ ರಿಕ್ಷಾ ಡಿಕ್ಕಿಯಾಗಿ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ರಿಕ್ಷಾ ಚಾಲಕ ಪುತ್ರಬೈಲು ನಿವಾಸಿ ಪ್ರಮೋದ್ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಎ10 ರಂದು ಸಂಜೆ ತನ್ನ ರಿಕ್ಷಾದಲ್ಲಿ ಮನೆಗೆ ಹೋಗುತ್ತಿರುವ ಸಂದರ್ಭ ಪುತ್ರಬೈಲು ಸಮೀಪ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಯಾಗಿ ರಿಕ್ಷಾ ಪಲ್ಟಿಯಾಗಿ ಇವರಿಗೆ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿತ್ತು ಅದಲ್ಲದೆ ರಿಕ್ಪಾದಲ್ಲಿದ್ದ ಇನ್ನಿಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು ಗಂಭೀರ ಗಾಯಗೊಂಡಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತಿತ್ತು ಅದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇವರು ಮಾಜಿ ತಾ.ಪಂ ಸದಸ್ಯ ಈಶ್ವರ ಬೈರ ಅವರ ಹಿರಿಯ ಪುತ್ರನಾಗಿದ್ದು ಲಾಯ್ಲ ಗ್ರಾ ಪಂ ಸದಸ್ಯ ಮೋಹನ ದಾಸ ಅವರ ಸಹೋದರನಾಗಿದ್ದಾರೆ ಪತ್ನಿ ಮಗು ಸೇರಿದಂತೆ ಅಪಾರ ಬಂಧು ವರ್ಗದವರನ್ನು ಅಗಲಿದ ಇವರು ತುಂಬ ಸಾದು ಸ್ವಭಾವದವರಾಗಿದ್ದು ಎಲ್ಲರಲ್ಲೂ ತುಂಬಾ ಆತ್ಮೀಯತೆಯಿಂದ ಮಾತನಾಡುವಂತಹ ವ್ಯಕ್ತಿಯಾಗಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!