ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಮರೋಡಿ ಅರುಣೋದಯ ಯುವಕ ಮಂಡಲ ಸಹಯೋಗದಲ್ಲಿ  ಕೋವಿಡ್ ವ್ಯಾಕ್ಸಿನೇಷನ್‌ ಲಸಿಕೆ ಕಾರ್ಯಕ್ರಮ

ಮರೋಡಿ ಅರುಣೋದಯ ಯುವಕ ಮಂಡಲ ಸಹಯೋಗದಲ್ಲಿ  ಕೋವಿಡ್ ವ್ಯಾಕ್ಸಿನೇಷನ್‌ ಲಸಿಕೆ ಕಾರ್ಯಕ್ರಮ

ಬೆಳ್ತಂಗಡಿ: ಮರೋಡಿ ಅರುಣೋದಯ ಯುವಕ ಮಂಡಲ ಮತ್ತು ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಕೋವಿಡ್‌–19 ತಡೆ ಲಸಿಕೆ ಕಾರ್ಯಕ್ರಮ ಯುವಕ ಮಂಡಲದ ಸಭಾಭವನದಲ್ಲಿ ಭಾನುವಾರ ನಡೆಯಿತು.

ಯುವಕ ಮಂಡಲದ ಗೌರವಾಧ್ಯಕ್ಷ, ಬಿಜೆಪಿ ಬೆಳ್ತಂಗಡಿ ಮಂಡಲದ ಅಧ್ಯಕ್ಷ ಜಯಂತ್ ಕೋಟ್ಯಾನ್‌ ಕೋವಿಡ್‌ ಲಸಿಕೆ ಪಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಒಟ್ಟು 96 ಮಂದಿಗೆ ಲಸಿಕೆ ನೀಡಲಾಯಿತು.

ಮರೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಶ್ರೀ ಜೈನ್‌, ಸದಸ್ಯರಾದ ಉಮೇಶ್‌ ಪೂಜಾರಿ, ಅಶೋಕ್‌ ಪೂಜಾರಿ, ಯಶೋದಾ, ಯುವಕ ಮಂಡಲದ ಅಧ್ಯಕ್ಷ ಬಾಲಕೃಷ್ಣ ಬಂಗೇರ, ಕಾರ್ಯದರ್ಶಿ ಸುದರ್ಶನ್‌, ನಾರಾವಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ದೀಕ್ಷಿತಾ, ಆರೋಗ್ಯ ಹಾಗೂ ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!