ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿಯ ಕಕ್ಕಿಂಜೆ ಮೂಲದ ಯುವ ಉದ್ಯಮಿ ಶಿರಸಿಯಲ್ಲಿ ಕೊಲೆ

ಬೆಳ್ತಂಗಡಿಯ ಕಕ್ಕಿಂಜೆ ಮೂಲದ ಯುವ ಉದ್ಯಮಿ ಶಿರಸಿಯಲ್ಲಿ ಕೊಲೆ

ಬೆಳ್ತಂಗಡಿ; ಬೆಳ್ತಂಗಡಿ ತಾಲೂಕಿನ ತೋಟತ್ತಾಡಿ ಸನಿಹದ ಬೆಂದ್ರಾಳದ ವ್ಯಕ್ತಿಯನ್ನು ಶಿರಸಿಯಲ್ಲಿ ಕೊಲೆಗೈದ ಘಟನೆ ಗುರುವಾರ ನಡೆದಿದೆ. ಎಸ್ಟೇಟ್ ಉದ್ಯಮ ಹಾಗೂ ಪ್ಲೈವುಡ್ ವ್ಯವಹಾರ ನಡೆಸುತ್ತಿದ್ದ ಸುದರ್ಶನ್ ಯಾನೆ ಹರ್ಷ ಕೊಲೆಗೀಡಾದ ವ್ಯಕ್ತಿಯಾಗಿದ್ದು ವಾಹನದಲ್ಲಿ ಅಪಘಾತವೆಸಗಿ ಬಳಿಕ ತಲವಾರು ದಾಳಿ ನಡೆಸಿ ಬರ್ಬರವಾಗಿ ಹತ್ಯೆಗೈಯಲಾಗಿದೆ.

ಶಿರಸಿ ಮುಂಡಗೋಡ ತಾಲೂಕಿನ ಬಡ್ಡಿಗೇರಿ ಎಂಬಲ್ಲಿ ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಈ ಹತ್ಯೆ ನಡೆಸಿ ಪರಾರಿಯಾಗಿದೆ ಎಂದು ತಿಳಿದುಬಂದಿದೆ.

ತನ್ನ ಬೈಕಿನಲ್ಲಿ ತೆರಳುತಿದ್ದ ಅವರಿಗೆ ಅಪಘಾತವೆಸಗಿದ ತಂಡ ಬಳಿಕ ತಲವಾರಿನಿಂದ​ ಕೊಚ್ಚಿ ಅವರನ್ನು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಮುಂಡಗೋಡ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಧಾವಿಸಿದ ಅಲ್ಲಿನ ಪೊಲೀಸರು ಮುಂದಿನ‌ ಅಗತ್ಯ ಕಾನೂನು ಕ್ರಮ ಜರುಗಿಸಿದ್ದಾರೆ. ಕೊಲೆಗೆ ನಿಖರ ಕಾರಣ ತಿಳಿಯಬೇಕಿದೆ. ತನಿಖೆ ಆರಂಭವಾಗಿದೆ.

ವ್ಯವಹಾರ ಸಂಬಂಧಿತ ವಿಚಾರವೊಂದರಿಂದ ಕಕ್ಕಿಂಜೆ ಊರು ತೊರೆದಿದ್ದ ಅವರು ಶಿರಸಿಯಲ್ಲಿ ನೆಲಸಿದ್ದರು.

ವ್ಯವಹಾರ ಅಥವಾ ಪೂರ್ವಧ್ವೇಷದ ಹಿನ್ನೆಲೆಯಲ್ಲಿ ಕೊಲೆಗೈದಿರುವ ಸಾಧ್ಯತೆ ದಟ್ಟ ವಾಗಿದೆ. ಹೆಚ್ಚಿನ ಮಾಹಿತಿ ತನಿಖೆಯಿಂದ ತಿಳಿದು ಬರಬೇಕಾಗಿದೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!