ಗೇರುಕಟ್ಟೆ ಸಮೀಪದ ಕಳಿಯ ಗ್ರಾಮದ ಕುಂಟಿನಿ ನಿವಾಸಿ ರೂಪಾ ಮತ್ತು ಪದ್ಮನಾಭ ಶೆಟ್ಟಿ ದಂಪತಿ ಪುತ್ರಿ ಧನುಷಾ ವಿವಾಹವು ಪುತ್ತೂರು ತಾಲೂಕಿನ ದಾರಂದಕುಕ್ಕು ನಿವಾಸಿ ಸವಿತಾ ಮತ್ತು ಉದಯ ಕುಮಾರ್ ನಾಯಕ್ ದಂಪತಿ ಪುತ್ರ ಗೋಪಿಕ್ ರವರೊಂದಿಗೆ ಇತ್ತೀಚೆಗೆ ನಡೆದಿತ್ತು.
ತಮ್ಮ ಸಂಬಂಧಿಕರಾದ ಶುಭಲಕ್ಷ್ಮೀ ಮತ್ತು ರೂಪಾ ವೇಣುಗೋಪಾಲ್ ಅವರ ಜೊತೆ ಬೆಂಗಳೂರಿನ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆಂದು ಇಂದು ಮುಂಜಾನೆ ಮಾರುತಿ ವ್ಯಾಗನರ್ ಕಾರಿನಲ್ಲಿ ಹೊರಟ್ಟಿದ್ದರು.
ಬೆಂಗಳೂರು ನೆಲಮಂಗಲ ಸಮೀಪ ಇವರ ಕಾರಿಗೆ ಕೋಳಿ ಸಾಗಾಟದ ಲಾರಿ ಡಿಕ್ಕಿ ಹೊಡೆದಿದೆ, ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿದ್ದ ಧನುಷಾ ಸ್ಥಳದಲ್ಲೇ ಮೃತಪಟ್ಟಿದ್ದರು. ಕಾರಿನಲ್ಲಿದ್ದ ಗೋಪಿಕ್ ಮತ್ತು ಸಂಬಂಧಿಕರು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.