ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › ಬೆಳ್ತಂಗಡಿ ಗಾಳಿ ಮಳೆ ಮನೆ ಅಂಗಡಿಗಳಿಗೆ ಹಾನಿ

ಬೆಳ್ತಂಗಡಿ ಗಾಳಿ ಮಳೆ ಮನೆ ಅಂಗಡಿಗಳಿಗೆ ಹಾನಿ

ಬೆಳ್ತಂಗಡಿ: ತಾಲೂಕಿನ ಹಲವೆಡೆ ಗುಡುಗು ಸಹಿತ ಬಾರೀ ಗಾಳಿ‌ಮಳೆ ಸುರಿದಿದೆ.

ಬುಧವಾರ ಸಂಜೆ ಬಾರೀ ಗಾಳಿ ಬೀಸಿದ್ದು ಗೇರುಕಟ್ಟೆ ಪೇಟೆಯಲ್ಲಿರುವ ಸತೀಶ್ ಸಾಲಿಯಾನ್ ಅವರ ಮಾಲಕತ್ವ ಕಟ್ಟಡದ ಹೆಂಚುಗಳು ಹಾರಿ ಹೋಗಿದೆ. ಸಂಜೆ ಸುಮಾರು 4 ಗಂಟೆ ಸಮಯಕ್ಕೆ ಈ ಘಟನೆ ಸಂಭವಿಸಿದೆ.

ಈ ಕಟ್ಟಡದಲ್ಲಿ ಕೋಣೆಗಳನ್ನು ಸೆಲೂನ್, ವೆಲ್ಡಿಂಗ್ ವರ್ಕ್ ಶಾಫ್, ಕೋಳಿ ಅಂಗಡಿ ಬಾಡಿಗೆ ನೀಡಲಾಗಿದೆ. ಗಾಳಿಯ ಜತೆಗೆ ಮಳೆಯಾಗಿದ್ದು, ಅಪಾರ ನಷ್ಟ ಉಂಟಾಗಿದೆ. ಒಡಿಲ್ನಾಳ ಗ್ರಾಮದಲ್ಲೂ ಭಾರೀ ಗಾಳಿಗೆ ಮನೆಗೆ ಹಾನಿಯಾದ ಘಟನೆ ನಡೆದಿದೆ.

ಅಲ್ಲದೆ ಕಳಿಯ ಗ್ರಾಮದಲ್ಲಿ ಹಲವಾರು ಮಂದಿಯ ತೋಟಕ್ಕೂ ಹಾನಿಯಾಗಿದೆ. ಅಡಿಕೆ ಮರಗಳು ಗಾಳಿಯಿಂದಾಗಿ ಧರಾಶಾಹಿಯಾಗಿದೆ.

ಕಂದಾಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಗ್ರಾ.ಪಂ. ಜನಪ್ರತಿನಿಧಿಗಳು ಭೇಟಿ‌ ನೀಡಿದ್ದಾರೆ.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!