ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜ ಹಾಗೂ ಕೆ.ಐ..ಓ.ಸಿ.ಎಲ್ ಸಂಸ್ಥೆಯ ಮುಖ್ಯ ಆಡಳಿತ ನಿರ್ದೇಶಕ ಎಂ. ವಿ. ಸುಬ್ಬರಾವ್ ಅವರು ಕೆ.ಐ.ಓ.ಸಿ.ಎಲ್ ಲಿಮಿಟೆಡ್ ವತಿಯಿಂದ ನೀಡಲಾದ 50 ಬೆಡ್ ಗಳನ್ನು ಆಸ್ಪತ್ರೆಯ ಆಡಳಿಯ ವರ್ಗಕ್ಕೆ ಹಸ್ತಾಂತರಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯಾನಂದ ಗೌಡ, ಸದಸ್ಯ ಶರತ್ ಕುಮಾರ್, ಕೆ.ಐ..ಓ.ಸಿ.ಎಲ್ ಸಂಸ್ಥೆಯ ವಿಭಾಗೀಯ ಪ್ರಬಂಧಕ ರಾಮಕೃಷ್ಣ ರಾವ್, ಸೀನಿಯರ್ ಎಚ್.ಆರ್. ಮೆನೇಜರ್ ಮುರುಗೇಶ್, ಎಚ್.ಆರ್. ಮೆನೇಜರ್ ರೊನಾಲ್ಡ್ ಪಾಯಸ್, ತಹಸೀಲ್ದಾರ್ ಮಹೇಶ್ ಜೆ., ತಾಲೂಕು ವೈದಾಧಿಕಾರಿ ಡಾ. ಕಲಾಮಧು , ತಾಲೂಕು ಆಸ್ಪತ್ರೆ ಆಡಳಿತ ವೈದಾಧಿಕಾರಿ ಡಾ. ವಿದ್ಯಾವತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಆಸ್ಪತ್ರೆ ಸಿಬ್ಬಂದಿ ಹಾಗೂ ಕೆ.ಐ..ಓ.ಸಿ.ಎಲ್. ಸಂಸ್ಥೆ ಸಿಬ್ಬಂದಿ ಉಪಸ್ಥಿತರಿದ್ದರು.