ವೀಡಿಯೊಗಳು

ರಾಜ್ಯ

ಕ್ರೀಡೆ

ಪ್ರತಿಭೆ

ಇದೇ ಪ್ರಾಬ್ಲಮ್

ಕ್ರೈಂ

ಆರೋಗ್ಯ

ತಂತ್ರಜ್ಞಾನ

ಸುತ್ತೋಣ ಬನ್ನಿ

ಎಡಿಟರ್ಸ್ ಚಾಯ್ಸ್

ಸ್ಪೆಷಲ್ ಪೋಸ್ಟ್

Home › 'ರಾಜಕೇಸರಿ' ಸಂಘಟನೆಯಿಂದ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ: ಸಮಾಜಮುಖಿ ಕಾರ್ಯದ ಮೂಲಕ‌ ಮಾದರಿಯಾದ ಸಂಘಟನೆ ಸದಸ್ಯರು

'ರಾಜಕೇಸರಿ' ಸಂಘಟನೆಯಿಂದ ಕೊರೊನಾದಿಂದ ಮೃತಪಟ್ಟ ವ್ಯಕ್ತಿಯ ಅಂತ್ಯಕ್ರಿಯೆ: ಸಮಾಜಮುಖಿ ಕಾರ್ಯದ ಮೂಲಕ‌ ಮಾದರಿಯಾದ ಸಂಘಟನೆ ಸದಸ್ಯರು

ಬೆಳ್ತಂಗಡಿ: ಕೊರೊನಾ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ಬೆಳ್ತಂಗಡಿಯ ರಾಜಕೇಸರಿ ಸಂಘಟನೆಯವರು ನೆರವೇರಿಸಿದರು.

ಮೂಲತಃ ವಿಜಯಪುರದವರಾದ ಧರ್ಮಸ್ಥಳ ಕೆಎಸ್‌ಆರ್‌ಟಿಸಿ ಡಿಪ್ಪೋದಲ್ಲಿ ಮೆಕಾನಿಕ್ ಆಗಿ ಕರ್ತವ್ಯದಲ್ಲಿರುವ ಪರಸಪ್ಪ ಛಲವಾದಿ(42) ಅಸೌಖ್ಯದಿಂದ ಬಳಲುತ್ತಿದ್ದು ಅವರಿಗೆ ಕೊರೊನಾ ಸೋಂಕು ತಗಲಿತ್ತು. ಎನ್ನಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಬಾಡಿಗೆ ಮನೆಯಲ್ಲಿ ವಾಸವಾಗಿರುವ ಇವರಿಗೆ ಪತ್ನಿ, ಮೂರು ಮಕ್ಕಳಿದ್ದಾರೆ.

ಹಲವು ಸಮಾಜಮುಖಿ ಕೆಲಸಗಳ ಮೂಲಕ ಮನೆಮಾತಗಿರುವ ರಾಜಕೇಸರಿ ಸಂಘಟನೆ ಅಶಕ್ತ ಕುಟುಂಬಗಳಿಗೆ ಆರೋಗ್ಯ ನೆರವು, ಮನೆ ಇಲ್ಲದ ನಿರ್ಗತಿಕರಿಗೆ ಮನೆ ನಿರ್ಮಾಣ, ರಕ್ತದಾನ ಶಿಬಿರ ಹಾಗೂ ಇನ್ನಿತರ ಸಮಾಜ ಸೇವೆಗಳ ಮೂಲಕ ಹೆಸರುವಾಸಿಯಾಗಿದೆ. ಕಳೆದ ಲಾಕ್ ಡೌನ್ ಸಮಯದಲ್ಲೂ ಕೊರೊನಾ ವಾರಿಯರ್ಸ್‌ಗಳಾಗಿ ಕರ್ತವ್ಯ ನಿರ್ವಹಿಸಿದ ಇವರ ಸೇವೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಅಂತ್ಯಕ್ರಿಯೆಯಲ್ಲಿ ರಾಜಕೇಸರಿ ಸಂಸ್ಥಾಪಕ ದೀಪಕ್ ಜಿ., ತಾಲೂಕು ಅಧ್ಯಕ್ಷ ಕಾರ್ತಿಕ್ ಸದಸ್ಯರುಗಳಾದ ಲೋಹಿತ್, ರಾಜೇಶ್ ಕೋವಿಡ್ ನಿಯಮ ಪಾಲಿಸಿ ನೆರವೇರಿಸಿದರು.

ಪ್ರಜಾಪ್ರಕಾಶ WhatsApp ಗ್ರೂಪ್

ಬೆಳ್ತಂಗಡಿ-ತುಳು ನಾಡಿನ ತಾಜಾ ಸುದ್ದಿಗಳು ನೇರವಾಗಿ ನಿಮ್ಮ ಫೋನ್‌ಗೆ

ಪ್ರಜಾಪ್ರಕಾಶ WhatsApp — ತಾಜಾ ಸುದ್ದಿಗಳು ನಿಮ್ಮ ಫೋನ್‌ಗೆ!