ಕೆಲ ದಿನಗಳಿಂದ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದ ನೋಣಯ್ಯ ಪೂಜಾರಿಗೆ ಕೊರೋನಾ ಪಾಸಿಟಿವ್ ಜೊತೆಗೆ ಬ್ಲ್ಯಾಕ್ ಫಂಗಸ್ ಕಂಡುಬಂದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ನೋಣಯ್ಯ ಪೂಜಾರಿ ಮೇ 27ರಂದು ಮೃತಪಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕಿನಲ್ಲಿ ಕೊರೊನಾ ನಡುವೆಯೂ ಇದೀಗ ಬ್ಲ್ಯಾಕ್ ಫಂಗಸ್ ಸಾಂಕ್ರಾಮಿಕ ರೋಗವೂ ತಾಲೂಕಿನ ಒರ್ವರನ್ನು ಬಲಿಪಡೆದಿದ್ದು, ಜನರು ಇನ್ನಷ್ಟು ಭಯಭೀತರಾಗುವಂತೆ ಮಾಡಿದೆ.