Home › ಸೇತುವೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ತಕ್ಷಣ ಸ್ಪಂದಿಸಿದ ಲಾಯಿಲ ಗ್ರಾ.ಪಂ ಸದಸ್ಯ
ಸೇತುವೆಯಲ್ಲಿ ನೀರು ನಿಂತು ಸಂಚಾರಕ್ಕೆ ಅಡಚಣೆ ತಕ್ಷಣ ಸ್ಪಂದಿಸಿದ ಲಾಯಿಲ ಗ್ರಾ.ಪಂ ಸದಸ್ಯ
ONLINE PUDU / Monday, May 31, 2021
ಲಾಯಿಲ: ಬೆಳ್ತಂಗಡಿಯ ಸೇತುವೆ ಮೇಲೆ ನೀರು ನಿಂತು ಸಂಚಾರಕ್ಕೆ ಅಡಚಣೆಯಾಗುತ್ತಿರುವುದನ್ನು ಮನಗಂಡು ಅದರಲ್ಲಿರುವ ರಂದ್ರಗಳು ಮಣ್ಣಿನಿಂದ ಮುಚ್ಚಲ್ಪಟ್ಟು ಮಳೆಯ ನೀರು ನಿಂತು ವಾಹನ ಹಾಗೂ ಜನ ಸಂಚಾರಕ್ಕೆ ಅನಾನೂಕೂಲವಾಗುತಿದ್ದು ಈ ಬಗ್ಗೆ ತಕ್ಷಣ ಸ್ಪಂದಿಸಿದ ಲಾಯಿಲ ಗ್ರಾಮ ಪಂಚಾಯತ್ ಸದಸ್ಯ ಅರವಿಂದ ಇವರು ರಾಘವೇಂದ್ರ ನಗರದ ಸ್ನೇಹ ಯುವಕ ಸಂಘದ ಯುವಕರನ್ನು ಕೂಡಿಕೊಂಡು ಸೇತುವೆ ಮೇಲೆ ನಿಂತಿದ್ದ ಮಣ್ಣನ್ನು ಸ್ವಚ್ಛಗೊಳಿಸಿ ಮಳೆ ನೀರನ್ನು ಸರಾಗವಾಗಿ ಹರಿಯುವಂತೆ ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ.
ಇವರ ಈ ಕಾರ್ಯ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.