ಕೇಂದ್ರ ಆರೋಗ್ಯ ಇಲಾಖೆಯಿಂದ ಈ ಗೈಡ್ಲೈನ್ಸ್ ಬಿಡುಗಡೆ ಆಗಿದ್ದು, ಅರೆ ನಗರ, ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ಕೋವಿಡ್ ನಿರ್ವಹಣೆಗೆ ಈ ಮಾರ್ಗಸೂಚಿ ಪಾಲಿಸುವಂತೆ ತಿಳಿಸಲಾಗಿದೆ. Centre issues guidelines ಕೇಂದ್ರ ಸರ್ಕಾರದಿಂದ ಕೋವಿಡ್ ಮಾರ್ಗಸೂಚಿ ಪ್ರಮುಖವಾಗಿ ಕೋವಿಡ್ ಗುಣಲಕ್ಷಣ ಕಂಡು ಬಂದ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದ್ದು, ಅಲ್ಲಿನ ಆಶಾ ಕಾರ್ಯಕರ್ತೆಯರು ಟೆಸ್ಟ್ ಮಾಡಿಸುವಂತೆ ಸೂಚಿಸಲಾಗಿದೆ. ಇದರ ಜತೆಗೆ ಗ್ರಾಮೀಣ ಪ್ರದೇಶದಲ್ಲಿ ಮನೆ-ಮನೆಗಳಿಗೆ ಹೋಗಿ ಸರ್ವೆ ಮಾಡಬೇಕಿದೆ.
ಪ್ರಮುಖ ಮಾರ್ಗಸೂಚಿಗಳು ಇಂತಿವೆ..- ಕೋವಿಡ್ ಗುಣಲಕ್ಷಣ/ತೀವ್ರ ಉಸಿರಾಟದ ತೊಂದರೆ ಕಂಡು ಬಂದರೆ ತಕ್ಷಣವೇ ಪರೀಕ್ಷೆ.
- ಸಮುದಾಯ ಆರೋಗ್ಯಾಧಿಕಾರಿಯಿಂದ ಕೋವಿಡ್ ಚಿಕಿತ್ಸೆ ಬಗ್ಗೆ ಮಾಹಿತಿ (ಟೆಲಿ ಕನ್ಸಲ್ವೇಷನ್) ರಾಪಿಡ್ ಆ್ಯಂಟಿಜೆನ್ ಪರೀಕ್ಷೆ ನಡೆಸಲು ಅಲ್ಲಿನ ನರ್ಸ್ಗಳಿಗೆ ಕೋವಿಡ್ ಟೆಸ್ಟ್ ತರಬೇತಿ.
- ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ಅವಶ್ಯಕತೆ ಇಲ್ಲದಿದ್ದರೆ ಮನೆಯಲ್ಲೇ ಹೋಂ ಐಸೋಲೇಷನ್ಗೆ ಸೂಚನೆ.
- ಕೋವಿಡ್ ಪರೀಕ್ಷೆ ಬರುವುದಕ್ಕಿಂತಲೂ ಮುಂಚಿತವಾಗಿ ಕ್ವಾರಂಟೈನ್ ಆಗಲು ಸೂಚನೆ.
- ಸಮುದಾಯ ಕೇಂದ್ರಗಳಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ನಡೆಸಲು ಎಲ್ಲ ರೀತಿಯ ಸೌಲಭ್ಯ ಇರುವಂತೆ ನೋಡಿಕೊಳ್ಳುವುದು.
- ಪ್ಯಾರಸಿಟಮಾಲ್ 500 ಮಿ.ಗ್ರಾಂ ಸೇರಿದಂತೆ ಅಗತ್ಯ ಔಷಧಿ ಒಳಗೊಂಡು ಪ್ರತ್ಯೇಕ ಕಿಟ್ (ಕೋವಿಡ್ ಸೋಂಕಿರುವ ಮನೆಗಳಿಗೆ) ಹೋಂ ಐಸೋಲೇಷನ್ನಲ್ಲಿರುವವರಿಗೆ ಕೋವಿಡ್ ಮೆಡಿಕಲ್ ಕಿಟ್ ನೀಡಲು ಸೂಚನೆ.
- ಪಲ್ಸ್ ರೇಟ್ 94ಕ್ಕಿಂತಲೂ ಕಡಿಮೆ ಇದ್ದರೆ ತಕ್ಷಣವೇ ಚಿಕಿತ್ಸೆ, ಜಿಲ್ಲಾ ಕೇಂದ್ರಗಳಿಗೆ ಕಳುಹಿಸಲು ನಿರ್ಧಾರ.