ಬೆಳ್ತಂಗಡಿ ತಾಲೂಕಿನ 11 ಗ್ರಾಮಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಗೆ ಒಳಪಡುತ್ತದೆ. ಇಲ್ಲಿನ ದಟ್ಟ ಅರಣ್ಯದಲ್ಲಿ ಶತಮಾನಗಳಿಂದ ಆದಿವಾಸಿ ಸಮುದಾಯದ ಮಲೆಕುಡಿಯ ಸಮುದಾಯದ ಜನರು ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪಟ್ಟಣ ಪ್ರದೇಶದಿಂದ 8-10 ಕಿಮೀ ದೂರದಲ್ಲಿರುವ ಇವರಿಗೆ ಅವರವರ ಪ್ರದೇಶಗಳಲ್ಲಿಯೇ ವ್ಯಾಕ್ಸಿನ್ ನೀಡಬೇಕು. ಕಳೆದ ಎರಡು ಅವಧಿಯಲ್ಲಿಯೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಆದಿವಾಸಿ ಸಮುದಾಯದ ಜನರಿಗೆ ಕೋವಿಡ್-19 ಬಾಧಿಸಿಲ್ಲ. ಸೂಕ್ತ ರಸ್ತೆ ವ್ಯವಸ್ಥೆ ಇಲ್ಲದೆ ವ್ಯಾಕ್ಸಿನ್ ಗಾಗಿ 8-10 ಕಿ.ಮೀ. ನಡೆಯುವುದು ಹಿರಿಯರಿಗೆ, ಅಸೌಖ್ಯದಿಂದ ಬಳಲುವವರಿಗೆ , ಗರ್ಭಿಣಿ ಮಹಿಳೆಯರಿಗೆ ಅಸಾಧ್ಯವಾಗಿದೆ. ಆದ್ದರಿಂದ ಅವರವರ ಪ್ರದೇಶದಲ್ಲಿ ವ್ಯಾಕ್ಸಿನ್ ನೀಡಬೇಕು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಾನಂದ ಪಿಲಿಕಲ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
Home › ಕಾನನದಲ್ಲಿ ವಾಸಿಸುತ್ತಿರುವ ಆದಿವಾಸಿಗಳಿಗೆ ಸ್ಥಳೀಯ ಪ್ರದೇಶಗಳಲ್ಲಿ ವ್ಯಾಕ್ಸಿನ್ ಹಾಕಿಸಲು ಕ್ರಮಕೈಗೊಳ್ಳಿ: ಸಮರ್ಪಕ ರಸ್ತೆ ವ್ಯವಸ್ಥೆ ಇಲ್ಲದ ಪ್ರದೇಶಗಳಿಂದ ವ್ಯಾಕ್ಸಿನ್ ಗಾಗಿ ಸುಮಾರು10 ಕಿ.ಮೀ. ನಡೆಯುವುದು ಕಷ್ಟಸಾಧ್ಯ: ಸರಕಾರ ಕ್ರಮಕೈಗೊಳ್ಳುವಂತೆ ಒತ್ತಾಯ: ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಜಯಾನಂದರಿಂದ ಒತ್ತಾಯ